ಮಂಗಳವಾರ ಸಂಜೆ ಬಂಟ್ವಾಳ ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಇದರಿಂದ ಹಲವೆಡೆ ಅನಾಹುತಗಳು ಉಂಟಾಗಿವೆ. ಮುಸ್ಸಂಜೆ ವೇಳೆ ಪರಿಸ್ಥಿತಿ ಸಹಜವಾಯಿತು.ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಮರ ಹಾಗೂ ವಿದ್ಯುತ್ ಕಂಬ ಬಿದ್ದಿದ್ದು, ಬಳಿಕ ಮೆಸ್ಕಾಂ ಹಾಗೂ ಸ್ಥಳೀಯರ ನೆರವಿನಿಂದ ತೆರವುಗೊಳಿಸಲಾಯಿತು. ಪ್ರಸ್ತುತ ರಸ್ತೆ ಸಂಚಾರ ಸುಗಮಗೊಂಡಿದೆ.ಬಾಳ್ತಿಲ ಗ್ರಾಮದ ಬೇಬಿ ಎಂಬವರ ಮನೆಯ ಶೀಟು ಛಾವಣಿಗೆ ಮಳೆ ಗಾಳಿಯಿಂದ ಹಾನಿಯಾಗಿದೆ. ನಾವೂರು ಗ್ರಾಮದ ಸುಲ್ತಾನ್ ಕಟ್ಟೆ ನಿವಾಸಿ ಮಹಮ್ಮದ್ ಇಸಾಕ್ ಅವರ ವಾಸ್ತವ್ಯದ ಮನೆ ಹಾನಿಯಾಗಿದೆ.