ಕಲ್ಲಡ್ಕ

ಅತಿಮಹಾರುದ್ರಯಾಗ: ಚಪ್ಪರ ಮುಹೂರ್ತ

ಜಾಹೀರಾತು

ಬಂಟ್ವಾಳ: ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ಚಪ್ಪರ ಮಹೂರ್ತ ಕಾರ್ಯಕ್ರಮ ಸೋಮವಾರ ನೆರವೇರಿತು. ಪ್ರಮುಖರಾದ ಯಾಗ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ರಘುನಾಥ ಸೋಮಯಾಜಿ, ಪದ್ಮನಾಭ ರೈ, ಕೃಷ್ಣಪ್ಪ ಪೂಜಾರಿ ದೋಟ, ಪ್ರದೀಪ್ ಕುಮಾರ್ ಕಲ್ಕೂರ, ರಾಜಾ ಬಂಟ್ವಾಳ ಮತ್ತಿತರರು ಈ ಸಂದರ್ಭ ಹಾಜರಿದ್ದರು.

ಕಲ್ಲಡ್ಕ ಮೊಗರನಾಡು ಸಾವಿರ ಸೀಮೆ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ 2,3,4 ರಂದು ಅನಂತ್ ಭಟ್ ಓಣಿಬೈಲು ನೇತೃತ್ವದಲ್ಲಿ ಅತಿಮಹಾರುದ್ರ ಯಾಗ ನಡೆಯಲಿದೆ. ರಾಷ್ಟ್ರ ರಾಜ್ಯ ಮಟ್ಟದ ಪ್ರಮುಖರು ಯಾಗದಲ್ಲಿ ಭಾಗವಹಿಸುವರು. ವಾರಾಣಾಸಿ ಕಾಶಿಮಠ ಶ್ರೀಮದ್ ಕಾಶಿಜ್ಞಾನ ಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ಈ ಯಾಗ ನಡೆಯಲಿದೆ. ಚಿತ್ರದುರ್ಗದ ಬಹ್ಮಾನಂದ ರೆಡ್ಡಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಈ ಯಾಗ ನಡೆಯಲಿದೆ.. 400 ಮಂದಿ ಋತ್ವಿಜರು, 14,641 ಸಂಖ್ಯೆಯಲ್ಲಿ ರುದ್ರ ಪಠಣ ಮಾಡಿ 11 ಕುಂಡಗಳಲ್ಲಿ ಹವಿಸ್ಸು ಸಮರ್ಪಣೆ ನಡೆಸುವ ಮೂಲಕ ಯಾಗ. ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ವೈದಿಕರಿಂದ ನಿತ್ಯ ರುದ್ರ ಪಾರಾಯಣ ಅನ್ನದಾನ ನಡೆಯುತ್ತಿದೆ

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts