ಕಲ್ಲಡ್ಕ

ನಿಟಿಲಾಪುರ ಸನ್ನಿಧಿಯಲ್ಲಿ ಅತಿಮಹಾರುದ್ರಯಾಗ: ಪೂರ್ವಭಾವಿಯಾಗಿ ರುದ್ರಪಠಣಕ್ಕೆ ಚಾಲನೆ

ನೆಟ್ಲ ನಿಟಿಲಾಪುರ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ನಡೆಯಲಿರುವ ಅತಿರುದ್ರಮಹಾಯಾಗಕ್ಕೆ ಪೂರ್ವಭಾವಿಯಾಗಿ ನಡೆಯಲಿರುವ ರುದ್ರಪಠಣದ ಭಾನುವಾರದ ಕಾರ್ಯಕ್ರಮಕ್ಕೆ ಚಂದ್ರಶೇಖರ ಭಂಡಾರಿ ಅಮ್ಮುಂಜೆಗುತ್ತು ಚಾಲನೆ ನೀಡಿದರು. ಪ್ರಮುಖರಾದ ಜಗನ್ನಾಥ ಚೌಟ ಬದಿಗುಡ್ಡೆ, ಡಾ, ಮನೋಜ್ ಕುಮಾ್ ಕಲ್ಲಡ್ಕ ಸಹಿತ ಪ್ರಮುಖರು ಹಾಜರಿದ್ದರು.

ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ 400 ಮಂದಿ ಋತ್ವಿಜರು, 14,641 ಸಂಖ್ಯೆಯಲ್ಲಿ ರುದ್ರ ಪಠಣ ಮಾಡಿ 11 ಕುಂಡಗಳಲ್ಲಿ ಹವಿಸ್ಸು ಸಮರ್ಪಣೆ ನಡೆಸುವ ಮೂಲಕ ಯಾಗ. ಕ್ಷೇತ್ರದಲ್ಲಿ ವೈದಿಕರಿಂದ ನಿತ್ಯ ರುದ್ರ ಪಾರಾಯಣ ಅನ್ನದಾನ ನಡೆಯುತ್ತಿದೆ.

ಭಾನುವಾರದ ರುದ್ರಪಾರಾಯಣಕ್ಕೆ ಚಂದ್ರಶೇಖರ ಭಂಡಾರಿ ಅಮ್ಮುಂಜೆಗುತ್ತು ದೀಪ ಬೆಳಗಿ ಚಾಲನೆ ನೀಡಿದರು. ಕಾರ್ಯಧ್ಯಕ್ಷರಾದ ಜಗನ್ನಾಥ್ ಚೌಟ ಬದಿಗುಡ್ಡೆ ಮಾಣಿ,ಮಹಾಗಣಪತಿ ದೇವಸ್ಥಾನ ಬೊಂಡಲ ಇದರ ಆಡಳಿತ ಮಂಡಳಿ ಸದಸ್ಯ ಡಾ. ಮನೋಜ್ ಕುಮಾರ್ ಕಲ್ಲಡ್ಕ, ಮಣಿಕಂಠ ಭಜನಾ ಮಂಡಳಿ ಸದಸ್ಯರು ಕುದ್ರೆಬೆಟ್ಟು,ಶ್ರೀ ದುರ್ಗಾ ಯುವಕ ಮಂಡಲ ಕಕ್ಕೇಮಜಲು,ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು. ಸೋಮವಾರ ಬೆಳಗ್ಗೆ 7ಗಂಟೆಗೆ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ  ನಡೆಯುವ ಅತಿಮಹಾರುದ್ರ ಯಾಗದ ಚಪ್ಪರ ಮುಹೂರ್ತ ನಡೆಯಲಿದೆ.

ಕಲ್ಲಡ್ಕ ಮೊಗರನಾಡು ಸಾವಿರ ಸೀಮೆ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಮೇ 2,3,4 ರಂದು ವಿಧ್ವನ್ ಅನಂತ್ ಭಟ್ ಓಣಿಬೈಲು ನೇತೃತ್ವದಲ್ಲಿ ಅತಿಮಹಾರುದ್ರ ಯಾಗ ನಡೆಯಲಿದೆ. ರಾಷ್ಟ್ರ ರಾಜ್ಯ ಮಟ್ಟದ ಪ್ರಮುಖರು ಯಾಗದಲ್ಲಿ ಭಾಗವಹಿಸುವರು. ವಾರಾಣಾಸಿ ಕಾಶಿಮಠ ಶ್ರೀಮದ್ ಕಾಶಿಜ್ಞಾನ ಸಿಂಹಾಸನಾದೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ಲೋಕ ಕಲ್ಯಾಣಾರ್ಥ ಈ ಯಾಗ ನಡೆಯಲಿದೆ. ಚಿತ್ರದುರ್ಗದ ಬಹ್ಮಾನಂದ ರೆಡ್ಡಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ