ಪ್ರಸ್ತುತ ಸಮಾಜದಲ್ಲಿ ಧಾರ್ಮಿಕ ಭೇದಭಾವ, ಜಾತಿ ವೈಷಮ್ಯ, ಆರ್ಥಿಕ ಅಸಮಾನತೆ, ಮತ್ತು ಸಾಮಾಜಿಕ ಅಸ್ಥಿರತೆ ಹೆಚ್ಚುತ್ತಿದೆ. ಇಂತಹ ಸಂದರ್ಭಗಳಲ್ಲಿ ನಾರಾಯಣಗುರುಗಳ ಸಮಾನತೆಯ ಸಂದೇಶ ಒಂದು ದೀಪಸ್ತಂಭವಾಗಿ ಕಾರ್ಯನಿರ್ವಹಿಸಿ ಸಮಾಜವನ್ನು ಬೆಳಗಿಸುತ್ತಿದೆ ಎಂದು ಬಂಟ್ವಾಳ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲು ತಿಳಿಸಿದರು
ಯುವವಾಹಿನಿ ಬಂಟ್ಟಾಳ ತಾಲೂಕು ಘಟಕದ ಸದಸ್ಯ ಶ್ರವಣ್ ಕೊಟ್ಯಾನ್ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 40 ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.ಕಾರ್ಯಕ್ರಮದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ರಾಜೇಶ್ ಸುವರ್ಣ, ನಾಗೇಶ್ ಪೊನ್ನೊಡಿ, ಶಿವಾನಂದ ಎಂ, ಅರುಣ್ ಕುಮಾರ್ ಮಹಾಕಾಳಿಬೆಟ್ಟು, ಸದಸ್ಯರಾದ ರಾಜೇಶ್ ಪೂಂಜರೆಕೋಡಿ, ಯಶೋಧರ ಕಡಂಬಳಿಕೆ, ಅಜಯ್ ನರಿಕೊಂಬು, ಯತೀಶ್ ಬೊಳ್ಳಾಯಿ, ಪ್ರಶಾಂತ್ ಏರಮಲೆ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಸ್ವಾಗತಿಸಿ, ವಂದಿಸಿದರು