ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಸಾನಿಧ್ಯಗಳು ನಮಗೆ ನೀಡುತ್ತವೆ ಎಂದು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ತಿಳಿಸಿದರು.
ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಏ.4ರಂದು ಆರಂಭಗೊಂಡ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಧರ್ಮ, ದೇವರು ಮತ್ತು ಪ್ರಕೃತಿ ಕುರಿತು ನಿರಂತರ ಅಧ್ಯಯನ ನಡೆಯುತ್ತಾ ಬಂದಿದೆ. ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಸಾನಿಧ್ಯ ಮಾಡುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ತಾಯಿಯನ್ನು ಗೌರವಿಸುವ ನಾಡಿನಲ್ಲಿ ನಾವಿದ್ದೇವೆ. ಇಂದು ತಾಯಿ ಲಕ್ಷ್ಮೀ, ಸರಸ್ವತಿ, ದುರ್ಗೆಯಾಗಿದ್ದಾಳೆ. ವಂದೇ ಮಾತರಂ ಹೆಸರಲ್ಲಿ ತಾಯಿಯ ಆರಾಧನೆ ನಡೆಯುತ್ತದೆ. ಭೂಮಿಯನ್ನು ಭಾರತದಲ್ಲಿ ಮಾತೃಭೂಮಿ ಎನ್ನುತ್ತೇವೆ. ಹಿಂದುಗಳು ಒಟ್ಟು ಸೇರಿ ದೇವಸ್ಥಾನ ಉಳಿಸುವ ಕೆಲಸ ಮಾಡಬೇಕು. ಹಿಂದು ಸಮಾಜ ಉಳಿದರೆ, ಭಾರತ ಉಳಿಯುತ್ತದೆ. ವಿಶ್ವ ಉಳಿಯುತ್ತದೆ. ಪ್ರಕೃತಿಯನ್ನು ಆರಾಧನೆ ಮಾಡುವ. ಧರ್ಮಕ್ಷೇತ್ರಗಳ ರಕ್ಷಣೆಯನ್ನು ನಾವು ಮಾಡೋಣ ಎಂದರು.
ರಕ್ತೇಶ್ವರಿ ದೇವಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಸೇವಾ ಸಮಿತಿ ಸದಸ್ಯರಾದ ಅಶ್ವನಿ ಕುಮಾರ್ ರೈ, ಸೇವಾ ಸಮಿತಿ ಕಾರ್ಯದರ್ಶಿ ಎನ್. ಶಿವಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ರಮೇಶಾನಂದ ಸೋಮಯಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ರಕ್ತೇಶ್ವರಿ ದೇವಿ ಸನ್ನಿಧಿ ಹಾಗೂ ಬಿ.ಸಿ.ರೋಡಿನ ಜನತೆಗಿರುವ ಸಂಬಂಧಗಳ ಕುರಿತು ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಸಹಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಪ್ತಾಸ್ತಾವಿಕ ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಸತೀಶ್ ಶೆಟ್ಟಿ ಮೊಡಂಕಾಪು ವಂದಿಸಿದರು. ದಿನೇಶ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ಸುದೀಪ್ ಶೆಟ್ಟಿ, ಸುನೀಲ್ ಬಿ, ಮನೋಹರ್, ಉಮೇಶ್, ಗೋಪಾಲ್ ಅವರನ್ನು ಗೌರವಿಸಲಾಯಿತು.