ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ
ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟ ಪಾಣೆಮಂಗಳೂರಿನಲ್ಲಿ ಶನಿವಾರ ನಡೆಯಿತು. ಈ ಸಂದರ್ಭ ಸರ್ವಧರ್ಮೀಯರು ಆಗಮಿಸಿ ಶುಭನುಡಿಗಳನ್ನಾಡಿದರು.ಈ ಸಂದರ್ಭ ಮಾತನಾಡಿದ ರಮಾನಾಥ ರೈ, ಸಾಮಾಜಿಕ ಬದುಕಿನಲ್ಲಿ ಇರುವವರು ಗಟ್ಟಿದನಿಯಲ್ಲಿ ಮಾತನಾಡಬೇಕಾಗಿದೆ. ಧಾರ್ಮಿಕ ಏಕತೆ, ಮನುಷ್ಯ ಮನುಷ್ಯನ ನಡುವಿನ ವಿಶ್ವಾವೃದ್ಧಿಗೆ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿದೆ. ನನ್ನ ಧರ್ಮ ಪರಧರ್ಮ ಸಹಿಷ್ಣುತೆಯನ್ನು ಬೋಧಿಸಿದ್ದು, ಅದನ್ನು ನಾನು ಅಕ್ಷರಶಃ ಪಾಲಿಸುತ್ತಿದ್ದೇನೆ ಎಂದರು.
ಅಲ್ಲಿಪಾದೆ ಚರ್ಚ್ ಧರ್ಮಗುರು ರೆ.ಫಾ.ರಾಬರ್ಟ್ ಡಿಸೋಜ ಶುಭ ಸಂದೇಶ ನೀಡಿ, ಇಫ್ತಾರ್ ಕೂಟ ಏರ್ಪಡಿಸುವ ಮೂಲಕ ಪರಸ್ಪರ ಸೌಹಾರ್ದ ಭಾವನೆ ಮೂಡಿಸಲು ಸಹಕಾರಿಯಾಗಿದೆ ಎಂದರು.
ಯುವಿವೆಫ್ ಕರ್ನಾಟಕದ ರಾಜ್ಯಾಧ್ಯಕ್ಷ ರಫಿವುದ್ದೀನ್ ಕುದ್ರೋಳಿ ಮಾತನಾಡಿ, ಧರ್ಮಗಳ ಕುರಿತು ನಮ್ಮಲ್ಲಿರುವ ಅಂತರ ದೂರೀಕರಿಸಲು ಪರಸ್ಪರ ಇರುವ ಕಂದಕ ದೂರಮಾಡಬೇಕು. ಇಸ್ಲಾಂ ಕುರಿತು ಇರುವ ತಪ್ಪು ಕಲ್ಪನೆಗಳನ್ನು ದೂರಮಾಡಬೇಕು, ಜಿಹಾದ್ ಕುರಿತೂ ತಪ್ಪು ಕಲ್ಪನೆಗಳಿವೆ. ಸೌಹಾರ್ದ ಸಮಾಜದ ಜೊತೆಗೆ ಸಹಿಷ್ಣು ಸಮಾಜ ಬೇಕು ವೇದಿಕೆಗಳಿಗೆ ಬರುವವರು ಮುಖವಾಡಗಳನ್ನು ಕಳಚಿ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ, ಪ್ರಮುಖರಾದ ಮುನೀರ್ ಕಾಟಿಪಳ್ಳ, ಪದ್ಮರಾಜ್ ಆರ್.ಪೂಜಾರಿ, ಯು.ಟಿ.ಇಫ್ತೀಕಾರ್ ಆಲಿ, ಪದ್ಮಶೇಖರ ಜೈನ್, ಪೃಥ್ವೀರಾಜ್ ಆರ್.ಕೆ , ನವೀನ್ ಡಿಸೋಜ, ಅಪ್ಪಿ, ಶಶಿಧರ ಹೆಗ್ಡೆ, ಧರಣೇಂದ್ರ ಕುಮಾರ್, ಕೆ.ಎಂ ಮುಸ್ತಫಾ, ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಶೇಖರ ಭಂಡಾರಿ ಅಮ್ಮುಂಜೆ, ಬಾಲಕೃಷ್ಣ ಅಂಚನ್, ಜೋಸ್ಪಿನ್ ಡಿಸೋಜ, ಶೈಲಜಾ ರಾಜೇಶ್, ಜಯಂತಿ ವಿ.ಪೂಜಾರಿ, ಬಿ.ಎಂ. ಅಬ್ಬಾಸ್ ಆಲಿ, ಪದ್ಮನಾಭ ರೈ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಇಬ್ರಾಹಿಂ ನವಾಝ್, ಶಬೀರ್ ಸಿದ್ದಕಟ್ಟೆ, ಮಹಮ್ಮದ್ ಶರೀಫ್, ಲುಕ್ಮಾನ್, ಸಿದ್ದೀಕ್ ಗುಡ್ಡೆಯಂಗಡಿ, ಯೂಸುಫ್ ಕರಂದಾಡಿ, ಶೋಭಾ ಶೆಟ್ಟಿ, ಸುದೀಪ್ ಕುಮಾರ್ ಶೆಟ್ಟಿ ಸಹಿತ ಪ್ರಮಖರು ಹಾಜರಿದ್ದರು. ತುಂಬೆ ಚಂದ್ರಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಬುಡಾ ಅಧ್ಯಕ್ಷ ಬೇಬಿ ಕುಂದರ್ ವಂದಿಸಿದರು.