ಬಂಟ್ವಾಳ: ವಿದ್ಯುತ್ ಪೂರೈಕೆ ಕಡಿತಗೊಳಿಸುವ ಕುರಿತು ಮೆಸ್ಕಾಂ ಪ್ರಕಟಣೆ ನೀಡಿದ್ದು, ಅದರಂತೆ 25ರಂದು ವಿದ್ಯುತ್ ಈ ಭಾಗಗಳಲ್ಲಿ ಪೂರೈಕೆ ಇಲ್ಲ. ಬೆಳಗ್ಗೆ 9.30ರಿಂದ ಸಂಜೆ 5ರವರೆಗೆ 100/33/11 ಕೆವಿ ಬಂಟ್ವಾಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ ತುಂಬೆ, ಸಜಿಪಮುನ್ನೂರು ವಾಟರ್ ಸಪ್ಲೈ ಫೀಡರ್, 33ಕೆವಿ ವಿದ್ಯುತ್ ಫೀಡರ್ ಹಾಗೂ 11 ಕೆವಿ ಫೀಡರ್ ಗಳಿಂದ ಹೊರಡುವ ಬಿ.ಸಿ.ರೋಡ್ ನಗರ, ತಂಬೆ, ಕಳ್ಳಿಗೆ, ಪುದು, ಮೇರಮಜಲು, ಸಜಿಪ ಹಾಗೂ 33ಕೆವಿ/11 ಬಂಟ್ವಾಳ ಕುಕ್ಕಿಪ್ಪಾಡಿ, ವಗ್ಗ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.