ಬಂಟ್ವಾಳ: ಜೋಡುಮಾರ್ಗ ಜೇಸಿ ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಟಿ.ವಿ.ಯನ್ನು ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಲಾಯಿತು.
ಜೇಸಿ ರಾಷ್ಟ್ರೀಯ ಉಪಾಧ್ಯಕ್ಷ ಜಿ.ಎಸ್.ಎನ್. ವರ್ಮಾ ಅವರು ಮುಖ್ಯ ಶಿಕ್ಷಕಿ ಲಕ್ಷ್ಮೀ ಹಾಗೂ ಶಿಕ್ಷಕವೃಂದಕ್ಕೆ ಹಸ್ತಾಂತರಿಸಿ ಮಾತನಾಡಿ, ಶಾಲಾ ಮಕ್ಕಳಿಗೆ ಇದು ಅನುಕೂಲವಾಗಲಿದೆ ಎಂದು ಶುಭ ಹಾರೈಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಹರೀಶ್ ಮಾಂಬಾಡಿ ಜೋಡುಮಾರ್ಗ ಜೇಸಿಯ ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭ ಜೇಸಿ ವಲಯಾಧ್ಯಕ್ಷ ಅಭಿಲಾಷ್ ಬಿ.ಎ, ವಲಯ ಉಪಾಧ್ಯಕ್ಷರಾದ ರಂಜಿತ್ ಎಚ್.ಡಿ, ವಲಯ ನಿರ್ದೇಶಕ ಅಜಿತ್ ರೈ, ವಿಘ್ನೇಶ್ ಪ್ರಸಾದ್ ರಾವ್, ಕಾಶಿನಾಥ್ ಗೋಗಟೆ, ವಲಯ ಸಂಯೋಜಕರಾದ ಸುಮಾ ಆಚಾರ್ಯ, ವಿನೀತ್ ಶಗ್ರಿತ್ತಾಯ, ಮಂಜುನಾಥ್, ಪ್ರಚಿತ್, ಗಾಯತ್ರಿ ಲೋಕೇಶ್, ಜೋಡುಮಾರ್ಗ ಜೇಸಿ ಅಧ್ಯಕ್ಷೆ ತೃಪ್ತಿ, ಪಿ, ನಿಕಟಪೂರ್ವಾಧ್ಯಕ್ಷ ಎಂ.ಸುಬ್ರಹ್ಮಣ್ಯ ಪೈ, ಪೂರ್ವಾಧ್ಯಕ್ಷರಾದ ಅಹಮದ್ ಮುಸ್ತಾಫ, ಜೋಡುಮಾರ್ಗ ಜೇಸಿಯ ನಿಕೇಶ್ ಕೆ, ಕಿಶೋರ್, ಸಮತಾ ಕಿಶೋರ್,ಕಾರ್ಯಕ್ರಮ ನಿರ್ದೇಶಕ ನಿಕೇಶ್ ಕೆ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವಿನೋದಾ, ಹಿರಿಯ ಶಿಕ್ಷಕರಾದ ತಾಹಿರಾ, ಸುಶೀಲಾ, ಹೇಮಾವತಿ, ಶಿಕ್ಷಕರಾದ ನಿಶ್ಮಿತಾ, ಪೂರ್ಣಿಮಾ, ಲಾವಣ್ಯ, ದಿವ್ಯಾ ಉಪಸ್ಥಿತರಿದ್ದರು. ಜೋಡುಮಾರ್ಗ ಜೇಸಿ ಅಧ್ಯಕ್ಷೆ ತೃಪ್ತಿ ಪಿ ಸ್ವಾಗತಿಸಿದರು.