ಒಟ್ಟು 6008 ವಿದ್ಯಾರ್ಥಿಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಿಂದ ಹಾಜರಾಗಲಿದ್ದಾರೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ಬಂಟ್ವಾಳ ತಾಲೂಕಿನಿಂದ 6008 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 18 ಕೇಂದ್ರಗಳಲ್ಲಿ 3159 ಹುಡುಗರು, 2849 ಹುಡುಗಿಯರು ಪರೀಕ್ಷೆ ಬರೆಯಲಿದ್ದು, ಇವರ ಪೈಕಿ 83 ಹುಡುಗರು, 13 ಹುಡುಗಿಯರು ಪುನರಾವರ್ತಿತ ಪರೀಕ್ಷೆ ಬರೆಯುವರು. ಕಲ್ಲಡ್ಕ ಶ್ರೀರಾಮ ಹೈಸ್ಕೂಲಿನ ಕೇಂದ್ರದಲ್ಲಿ 485, ವಾಮದಪದವಿನಲ್ಲಿ 470, ವಿಟ್ಲ ಪ್ರೌಢಶಾಲೆಯಲ್ಲಿ 400, ಎಸ್.ವಿ.ಎಸ್. ಟೆಂಪಲ್ ಶಾಲೆಯಲ್ಲಿ 455 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಉಳಿದಂತೆ ಒಟ್ಟು 18 ಕೇಂದ್ರಗಳಿಂದ ವಿದ್ಯಾರ್ಥಿಗಳ ಪರೀಕ್ಷೆ ಬರೆಯಲಿದ್ದಾರೆ. ಈಗಾಗಲೇ ಶಿಕ್ಷಣ ಇಲಾಖೆ ಸೂಚನೆಯಂತೆ ಬಂಟ್ವಾಳ ತಾಲೂಕಿನ ಎಲ್ಲ ಕೇಂದ್ರಗಳಲ್ಲೂ ಸಿಸಿಟಿವಿ ಕಣ್ಗಾವಲು ಇಡಲಾಗಿದೆ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪ್ರತಿ ಕೇಂದ್ರದಲ್ಲೂ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.