ಬಂಟ್ವಾಳ

ಇರಬೇಕಾದದ್ದು ಇಪ್ಪತ್ತೇಳು, ಇರೋದು ಒಬ್ಬರೇ!!

| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ

ಜಾಹೀರಾತು

ಇರಬೇಕಾದದ್ದು ಇಪ್ಪತ್ತೇಳು, ಇರೋದು ಒಬ್ಬರೇ. ಇದು ಬಂಟ್ವಾಳ ತಾಲೂಕಿನ ಕೃಷಿ ಇಲಾಖೆಯ ಸ್ಥಿತಿ. ಒಟ್ಟು ೫೮ ಗ್ರಾಮ ಪಂಚಾಯಿತಿ, ೮೪ ಗ್ರಾಮಗಳನ್ನು ಹೊಂದಿರುವ ಬಂಟ್ವಾಳ ತಾಲೂಕಿನಲ್ಲಿ ಮೂರು ರೈತ ಸಂಪರ್ಕ ಕೇಂದ್ರಗಳು ಇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕೃಷಿ ಇಲಾಖೆಗೆ ಸಂಬಂಧಿಸಿ ಅತಿ ದೊಡ್ಡ ತಾಲೂಕು ಎಂದು ಗುರುತಿಸಲಾದ ಬಂಟ್ವಾಳಕ್ಕೆ ಸಹಾಯಕ ಕೃಷಿ ನಿರ್ದೇಶಕರ ಸಹಿತ ಕಾಯಂ ಅಧಿಕಾರಿಗಳ ಕೊರತೆ ಇದೆ.

https://www.opticworld.net/

ವಿಸ್ತಾರವಾದ ತಾಲೂಕಿನಲ್ಲಿ ಫಲಾನುಭವಿಗಳ ಆಯ್ಕೆಯಿಂದ ತೊಡಗಿ, ತಾಲೂಕು ಮಟ್ಟದ ಸಭೆಯಿಂದ ಮೊದಲ್ಗೊಂಡು, ಗ್ರಾಮಸಭೆಗಳವರೆಗೆ ಜನಪ್ರತಿನಿಧಿಗಳ, ಸಾರ್ವಜನಿಕರ ದೂರು, ಆಕ್ರೋಶ, ವ್ಯಂಗ್ಯ, ಟೀಕೆಗಳಿಗೆ ಕಿವಿಯಾಗಬೇಕು. ಇಡೀ ತಾಲೂಕಿನ ಕೃಷಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು, ಲೆಕ್ಕಪತ್ರಗಳನ್ನು ನಿರ್ವಹಿಸುವುದು, ಕಚೇರಿಗೆ ಬಂದವರ ಸಮಸ್ಯೆಗಳನ್ನು ಆಲಿಸಬೇಕು. ಬಂಟ್ವಾಳ ತಾಲೂಕಿನಲ್ಲಿ ೨೦೨೨ರಿಂದ ಸಹಾಯಕ ಕೃಷಿ ನಿರ್ದೇಶಕರು ವರ್ಗವಾದ ಬಳಿಕ ಬದಲಿ ಅಧಿಕಾರಿಯೇ ಬಂದಿಲ್ಲ. ಈಗ ನಿಯೋಜನೆ ಮೇಲೆ ಅಧಿಕಾರಿಯೊಬ್ಬರು ವಾರದಲ್ಲಿ ಎರಡು ದಿನ ಬಂದು ಹೋಗುತ್ತಾರೆ. ಹಾಗೆಯೇ ಇಲಾಖೆಯಲ್ಲಿ ಎಲ್ಲವೂ ತಾತ್ಕಾಲಿಕವಾಗಿ ಕೆಲಸ ಮಾಡುವವರ ಸಹಾಯದಿಂದ ಕೆಲಸ ಕಾರ್ಯಗಳು ನಡೆಯುತ್ತಿವೆ.

ಬೆಟ್ಟದಷ್ಟು ಕೆಲಸ:
ಇಲಾಖಾ ಮಾಹಿತಿ, ಬೀಜ, ರಸಗೊಬ್ಬರ, ಔಷ ಮತ್ತು ಇತರ ಸೌಲಭ್ಯಗಳ ವಿತರಣೆ ಕುರಿತು ನಿಗಾ ಇರಿಸಬೇಕು. ರಸಗೊಬ್ಬರ ಅಂಗಡಿಗಳ ನಿಯಂತ್ರಣ ನೋಡಿಕೊಳ್ಳಬೇಕು. ಪಿಎಂ ಕಿಸಾನ್ ನಂಥ ಯೋಜನೆಗಳ ನೋಂದಣಿ, ಪರಿಶೀಲನೆ ನಡೆಸಬೇಕು, ಬೆಳೆ ಸಮೀಕ್ಷೆ, ಬೆಳೆ ಹಾನಿ ಸಮೀಕ್ಷೆ, ವಿವಿಧ ಮಾಹಿತಿ ಕಾರ್ಯಕ್ರಮ, ಗ್ರಾಮಸಭೆ, ಅಧಿಕಾರಿಗಳ ಮತ್ತು ಜನಪ್ರತಿನಿಗಳ ಸಭೆ ಹೀಗೆ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಸಭೆಗಳಿಗೆ ಹೋಗದಿದ್ದರೆ, ಎಲ್ಲಿದ್ದಾರೆ ಅಧಿಕಾರಿಗಳು ಎಂಬ ಪ್ರಶ್ನೆಯನ್ನು ಎದುರಿಸಬೇಕು, ಸಾರ್ವಜನಿಕರ ಟೀಕೆ, ಟಿಪ್ಪಣಿಗಳಿಗೆ ಸದಾ ಕಿವಿಯಾಗಬೇಕು.
ರೈತರಿಗೂ ಕಷ್ಟ, ಇರುವ ಸಿಬ್ಬಂದಿಗೂ ಸಂಕಷ್ಟ ಅಗತ್ಯಕ್ಕಿಂತ ಕಡಿಮೆ ಸಿಬ್ಬಂದಿ ಇರುವ ಕಾರಣ, ರೈತರಿಗೂ ಕಷ್ಟ, ಸಿಬ್ಬಂದಿಗೂ ಸಂಕಷ್ಟ. ಸಹಜವಾಗಿ ಒತ್ತಡ ಹೆಚ್ಚು. ಇದರ ಪರಿಣಾಮ ರೈತರಿಗೂ ಆಗುತ್ತದೆ. ಕ್ಷೇತ್ರಕ್ಕೆ ಬಂದು ಸಲಹೆ ಮಾರ್ಗದರ್ಶನ ಮಾಡಲು ಸಹಾಯಕ ಕೃಷಿ ಅಕಾರಿಗಳೂ ಇಲ್ಲ, ರೈತ ಸಂಪರ್ಕ ಕೇಂದ್ರಗಳಲ್ಲೂ ಇಂಥದ್ದೇ ಸ್ಥಿತಿ. ವಿವಿಧ ಯೋಜನೆ, ಸಹಾಯಧನ ಪಡೆಯಲು ರೈತನೂ, ಇರುವ ಸಿಬ್ಬಂದಿಯೂ ಪರದಾಟ ನಡೆಸಬೇಕು.

ಬಂಟ್ವಾಳ ಕೃಷಿ ಇಲಾಖೆ ಹುದ್ದೆಗಳ ವಿವರ
ಸಹಾಯಕ ಕೃಷಿ ನಿರ್ದೇಶಕರು: 1, ಖಾಲಿ 1 ಕಾರ್ಯನಿರ್ವಹಿಸುತ್ತಿರುವವರು ೦
ಕೃಷಿ ಅಧಿಕಾರಿ: 5 ಖಾಲಿ 4 ಕಾರ್ಯನಿರ್ವಹಿಸುತ್ತಿರುವವರು ೧
ಸಹಾಯಕ ಕೃಷಿ ಅಧಿಕಾರಿ 12, ಖಾಲಿ 12, ಕಾರ್ಯನಿರ್ವಹಿಸುತ್ತಿರುವವರು ೦
ಅಧೀಕ್ಷಕರು 1, ಖಾಲಿ 1, ಕಾರ್ಯನಿರ್ವಹಿಸುತ್ತಿರುವವರು ೦
ಬೆರಳಚ್ಚುಗಾರರು 1, ಖಾಲಿ 1, ಕಾರ್ಯನಿರ್ವಹಿಸುತ್ತಿರುವವರು ೦
ಪ್ರಥಮ ದರ್ಜೆ ಸಹಾಯಕರು 1, ಖಾಲಿ 1, ಕಾರ್ಯನಿರ್ವಹಿಸುತ್ತಿರುವವರು ೦
ದ್ವಿತೀಯ ದರ್ಜೇ ಸಹಾಯಕರು 2, ಖಾಲಿ 2, ಕಾರ್ಯನಿರ್ವಹಿಸುತ್ತಿರುವವರು ೦
ವಾಹನ ಚಾಲಕರು 1, ಖಾಲಿ 1, ಕಾರ್ಯನಿರ್ವಹಿಸುತ್ತಿರುವವರು ೦
ಕಚೇರಿ ಸಹಾಯಕರು 3, ಖಾಲಿ 3, ಕಾರ್ಯನಿರ್ವಹಿಸುತ್ತಿರುವವರು ೦

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.