https://www.opticworld.net/
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೋತ್ಸವ ನಿಮಿತ್ತ ಮಾರ್ಚ್ 14ರಂದು ಧ್ವಜಾರೋಹಣ ನೆರವೇರಲಿದೆ. ಅಂದು ರಾತ್ರಿ 7 ಗಂಟೆಗೆ ನಂದ್ಯದಿಂದ ಪೊಳಲಿಗೆ ಭಗವತಿಯ ಭಂಡಾರ ಆಗಮನ. ರಾತ್ರಿ 8.30 ಗಂಟೆಗೆ ಉಳಿಪ್ಪಾಡಿಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿ ಶ್ರೀ ದೇವರ ಬಲಿ ಹೊರಟು ಧ್ವಜಾರೋಹಣ ನಡೆಯಲಿದೆ.
ರಾತ್ರಿ 11 ಗಂಟೆಯಿಂದ ದೇವರ ಉತ್ಸವ ಬಲಿ ಪ್ರಾರಂಭ. 15ರ ಶನಿವಾರ ಬೆಳಿಗ್ಗೆ 5.30 ಗಂಟೆಗೆ ಕಂಚಿಲು ಬಲಿ, 8.30 ಗಂಟೆಗೆ ಸಣ್ಣ ರಥೋತ್ಸವ ಹಾಗೂ 9 ಗಂಟೆಗೆ ಕುದಿ ಕರೆಯುವ ಮೂಲಕ ಪೊಳಲಿ ಜಾತ್ರೆಗೆ ವಿಧ್ಯುಕ್ತ ಚಾಲನೆ ದೊರಕಲಿದೆ.