https://www.opticworld.net/
ಈ ರಸ್ತೆಯನ್ನು ಹೆಸರಿಗಷ್ಟೇ ಅಂತಾರಾಜ್ಯ ಹೆದ್ದಾರಿ ಎನ್ನಬಹುದು. ಆದರೆ ಇಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ. ಕಲ್ಲಡ್ಕ ಕಾಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಕಲ್ಲಡ್ಕದಿಂದ ಗೋಳ್ತಮಜಲುವರೆಗಿನ ಭಾಗ ಸಂಪೂರ್ಣ ಹದಗೆಟ್ಟಿದ್ದು ಹೊಂಡಗಳಿಂದ ಕೂಡಿದೆ.ಕಲ್ಲಡ್ಕದಿಂದ ವಿಟ್ಲ ಮೂಲಕ ಕೇರಳದ ಕಾಞಂಗಾಡ್ ತಲುಪುವ ಹೆದ್ದಾರಿಯಲ್ಲಿ ವಾಹನ ಸವಾರರು ಸಂಚರಿಸಲು ಹಿಂದೇಟು ಹಾಕುವಂಥ ಪರಿಸ್ಥಿತಿ ಇದೆ.
ಈಗಾಗಲೇ ಮಂಗಳೂರಿನಿಂದ ವಿಟ್ಲಕ್ಕೆ ಸಾಗುವ ಮಾರ್ಗದಲ್ಲಿ ಮೆಲ್ಕಾರ್ ನಿಂದ ಕಲ್ಲಡ್ಕದವರೆಗೆ ಚತುಷ್ಪಥ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಹದಗೆಟ್ಟಿದೆ. ಆದರೆ ಯಾವುದೇ ಸಮಸ್ಯೆ ಇರದಿದ್ದ ಕಲ್ಲಡ್ಕ ವಿಟ್ಲ ರಸ್ತೆಯಲ್ಲೂ ಹೊಂಡ ಗುಂಡಿಗಳು ತುಂಬಿವೆ. ಅದರಲ್ಲೂ ಕಲ್ಲಡ್ಕ ಪೇಟೆಯಿಂದ ಮುಂದಕ್ಕೆ ಸಾಗುವಾಗ ಗೋಳ್ತಮಜಲುವರೆಗಿನ ರಸ್ತೆ ಸಂಪೂರ್ಣ ನಾಶವಾಗಿದೆ. ಸಂಬಂಧಪಟ್ಟವರು ಈ ಕುರಿತು ಗಮನಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.