ಬೇಂಜನಪದವಿನಲ್ಲಿ ಲಯನ್ಸ್ ಪ್ರಾಂತೀಯ ಸಮ್ಮಿಲನ ಮಾರ್ಚ್ 9ರಂದು ನಡೆಯಲಿದೆ ಎಂದು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರಾಂತೀಯ ಅಧ್ಯಕ್ಷ ಯೂಜಿನ್ ಲೋಬೊ ಹೇಳಿದ್ದಾರೆ.
ಲೊರೆಟ್ಟೊ ಅಗ್ರಾರ್ ಕ್ಲಬ್ ಆತಿಥ್ಯದಲ್ಲಿ ಈ ಕಾರ್ಯಕ್ರಮ ಬಾಂಧವ್ಯ ಹೆಸರಿನಲ್ಲಿ ನಡೆಯಲಿದ್ದು, ಲಯನ್ಸ್ ಪ್ರಾಂತ್ಯದ 11 ಕ್ಲಬ್ ಗಳ ಸುಮಾರು 300ರಷ್ಟು ಸದಸ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು. ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 3ರ ಸಮ್ಮಿಲನ ಇದಾಗಿದ್ದು, ಮುಖ್ಯ ಅತಿಥಿಯಾಗಿ ಲೇಖಕ ಅರವಿಂದ ಚೊಕ್ಕಾಡಿ ಅವರು ಭಾಗವಹಿಸಲಿದ್ದಾರೆ. ಲಯನ್ಸ್ ಪ್ರಾಂತ್ಯದ ಮೊದಲ ಮಹಿಳೆ ಕ್ಲೌಡಿಯಾ ಲೋಬೊ ಉದ್ಘಾಟಿಸುವರು. ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಈ ಸಂದರ್ಭ ಮಾಹಿತಿ ನೀಡಿದ ಸಮ್ಮೇಳನ ಸಮಿತಿಯ ಅಧ್ಯಕ್ಷ ಜೋನ್ ಸಿರಿಲ್ ಡಿಸೋಜ, ಲಯನ್ಸ್ ಕ್ಲಬ್ ಗಳ ಪರಸ್ಪರ ಸಹಕಾರ, ಸ್ನೇಹ ಹಾಗೂ ಸಮಾಜಮಜುಖಿ ಸೇವಾ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶ ಸಮ್ಮಿಲನಕ್ಕಿದೆ. ಇದೇ ಸಂದರ್ಭ ಆಂಬುಲೆನ್ಸ್ ವಾಹನವನ್ನು ಲೋಕಾರ್ಪಣೆ ಮಾಡಲಾಗುತ್ತದೆ, ರಾಯಿ ಕ್ಲಬ್ ಇದರ ಉಸ್ತುವಾರಿ ವಹಿಸುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಸಮಿತಿ ಕಾರ್ಯದರ್ಶಿ ಉಮೇಶ್ ಆಚಾರ್, ಕೋಶಾಧಿಕಾರಿ ಫೆಲಿಕ್ಸ್ ಲೋಬೊ, ಆತಿಥೇಯ ಸಂಸ್ಥೆಯ ಕಾರ್ಯದರ್ಶಿ ಸೂರಜ್ ನೊರೊನ್ಹಾ, ಪ್ರಮುಖರಾದ ರಾಮ್ ಪ್ರಸಾದ್ ರೈ ತಿರುವಾಜೆ ಉಪಸ್ಥಿತರಿದ್ದರು.