ರಾಜ್ಯ ಸರಕಾರಿ ಪ್ರೌಢಶಾಲಾ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷರಾಗಿ ಶಿವಪ್ರಸಾದ್ ರೈ ಆಯ್ಕೆಯಾಗಿದ್ದಾರೆ. ಕೊಡಂಗೆ ಶಾಲಾ ಮುಖ್ಯ ಶಿಕ್ಷಕ ಸುಧೀರ್ ಜಿ. ಮುಖ್ಯ ಚುನಾವಣಾಧಿಕಾರಿಗಳಾಗಿ ಆಯ್ಕೆ ಪ್ರಕ್ರಿಯೆ ನೆರವೇರಿತು. ಎಲ್ಲರೂ ಅವಿರೋಧವಾಗಿ ಆಯ್ಕೆಗೊಂಡರು. ಪದಾಧಿಕಾರಿಗಳ ವಿವರ ಹೀಗಿದೆ
ಅಧ್ಯಕ್ಷರಾಗಿ ಬಿ.ಸಿ.ರೋಡಿನ ಅಜ್ಜಿಬೆಟ್ಟು ಸರಕಾರಿ ಪ್ರೌಢಶಾಲೆಯ ಶಿವಪ್ರಸಾದ್ ರೈ, ಉಪಾಧ್ಯಕ್ಷರಾಗಿ ನಯನಾಡು ಸರಕಾರಿ ಪ್ರೌಢಶಾಲೆಯ ಸುಕನ್ಯರತ್ನ, ,ಪ್ರಧಾನ ಕಾರ್ಯದರ್ಶಿಯಾಗಿ ಗೋಳ್ತಮಜಲು ಸರಕಾರಿ ಪ್ರೌಢಶಾಲೆಯ ಪ್ರಕಾಶ .ಟಿ ಖಜಾಂಚಿಯಾಗಿ ಪಂಜಿಕಲ್ಲು ಸರಕಾರಿ ಪ್ರೌಢಶಾಲೆಯ ನವೀನ್ ಪಿ.ಎಸ್. ಹಾಗೂ ಜಂಟಿ ಕಾರ್ಯದರ್ಶಿಯಾಗಿ ಕೊಯಿಲ ಸರಕಾರಿ ಪ್ರೌಢಶಾಲೆಯ ಜನಾರ್ಧನ ಆಚಾರ್ಯ ಸಹಕಾರ್ಯದರ್ಶಿಯಾಗಿ ಮಂಚಿಕುಕ್ಕಾಜೆ ಸರಕಾರಿ ಪ್ರೌಢಶಾಲೆಯ ವಿನೋದ ಕುಮಾರಿ ಬಿ. ಸರ್ವಾನುಮತದಿಂದ ಆಯ್ಕೆಯಾದರು. ನಾವೂರು ಸರಕಾರಿ ಪ್ರೌಢಶಾಲೆಯ ಚಿನ್ನಪ್ಪ.ಕೆ ಜಾಲ್ಸೂರು, ಪೊಳಲಿ ಸರಕಾರಿ ಪ್ರೌಢಶಾಲೆಯ ಜಯಂತ ಆಚಾರ್ಯ, ಬಿಳಿಯೂರು ಸರಕಾರಿ ಪ್ರೌಢಶಾಲೆಯ ಜನಾರ್ದನ ಮೂಲ್ಯ ಈ ಸಂದರ್ಭ ಉಪಸ್ಥಿತರಿದ್ದರು.
https://www.opticworld.net/