ಬಂಟ್ವಾಳ: ಮಾರ್ಚ್ 6ರಂದು ಬಿ.ಸಿ.ರೋಡಿನ ವಿವೇಕನಗರದ ಶಕ್ತಿ ಕಂಪೌಂಡ್ ನ ಒಂದನೇ ಮಹಡಿಯಲ್ಲಿ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋಅಪರೇಟಿವ್ ಸೊಸೈಟಿ ಉದ್ಘಾಟನೆಗೊಳ್ಳಲಿದೆ.
ಬೆಳಗ್ಗೆ 9ಕ್ಕೆ ನಡೆಯುವ ಕಾರ್ಯಕ್ರಮವನ್ನು ಕಟೀಲು ಆನುವಂಶಿಕ ಅರ್ಚಕ ವೆಂಕಟರಮಣ ಆಸ್ಪಣ್ಣ ದೀಪಪ್ರಜ್ವಲನಗೊಳಿಸಿ ಆಶೀರ್ವಚನ ನೀಡುವರು. ಉದ್ಘಾಟನೆಯನ್ನು ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ, ರಾಜ್ಯ ಸೌಹಾರ್ದ ಸಂಯಕ್ತ ಸಹಕಾರಿ ನಿರ್ದೇಶಕಿ ಭಾರತಿ ಜಿ. ಭಟ್ ನೆರವೇರಿಸುವರು. ಭದ್ರತಾ ಕೊಠಡಿಯನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಮೈಸೂರು ಪ್ರಾಂತ ಅಧಿಕಾರಿ ಗುರುಪ್ರಸಾದ್ ಬಂಗೇರ, ಸಹಕಾರಿ ನಾಮಫಲಕವನ್ನು ಪುತ್ತೂರು ಮಾಜಿ ಪುರಸಭಾಧ್ಯಕ್ಷ ಜೀವಂಧರ ಜೈನ್ ಉದ್ಘಾಟಿಸುವರು. ನಗದು ಕೌಂಟರ್ ಅನ್ನು ಶ್ರೀಮಾತಾ ಸೌಹಾರ್ದ ಸಹಕಾರಿ ಸಮಘದ ದ ಅಧ್ಯಕ್ಷ ದಾಮೋದರ ಕುಲಾಲ್, ಗಣಕಯಂತ್ರವನ್ನು ದ.ಕ.ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ನಿರಖು ಠೇವಣಿ ಪತ್ರವನ್ನು ಕುಂಬಾರರ ಗುಡಿಕೈಗಾರಿಕಾ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿ ಹಾಗೂ ನಗದ ಪತ್ರವನ್ನು ವಕೀಲರು, ನೋಟರಿ ಅಶ್ವನಿ ಕುಮಾರ್ ರೈ ಬಿಡುಗಡೆಗೊಳಿಸುವರು. ಮುಖ್ಯ ಆತಿಥಿಗಳಾಗಿ ಸಹಕಾರಿ ಉಪನಿಬಂಧಕ ಎಚ್.ಎನ್.ರಮೇಶ್, ಪುರಸಭಾಧ್ಯಕ್ಷ ವಾಸು ಪೂಜಾರಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಧ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎೆಸ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್. ರಕ್ತೆಶ್ವರಿ ದೇವಿ ಸನ್ನಿಧಿ ಸೇವಾ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ್, ಕಡೇಶಿವಾಲಯ ದೇವಸ್ಥಾನ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಸಾಂತಪ್ಪ ಪೂಜಾರಿ ಭಾಗವಹಿಸುವರು. ಸೊಸೈಟಿ ಅಧ್ಯಕ್ಷೆ ರೋಹಿಣಿ ಉದಯ್ ಅಧ್ಯಕ್ಷತೆ ವಹಿಸುವರು ಎಂದು ಸಿಇಒ ಉದಯ ವೆಂಕಟೇಶ ಭಟ್ ತಿಳಿಸಿದ್ದಾರೆ.