ಬಂಟ್ವಾಳ: ಬಿ.ಸಿ.ರೋಡು ಅಜ್ಜಿಬೆಟ್ಟುವಿನ ಬಸವ ಮಂಟಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಕಮಹಾದೇವಿ ಶಿಶುಮಂದಿರದ 15 ನೇ ವಾರ್ಷಿಕೋತ್ಸವ, ಪಾದಪೂಜೆ ಹಾಗೂ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಸಹಿತ ಶಿಶುಮಂದಿರದ ಶಿಶುಗಳ ಪ್ರತಿಭಾ ದಿನೋತ್ಸವ ಶುಕ್ರವಾರ ನಡೆಯಿತು.
ಜೆಸಿಐ ಬಂಟ್ವಾಳದ ಕಾರ್ಯದರ್ಶಿ ಕಿಶೋರ್ ಕುಮಾರ್ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ವ್ಯವಸ್ಥೆ ವ್ಯಾಪಾರಿಕರಣವಾಗುತ್ತಿರುವ ಈ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತಿದೆ ಎಂದರು. ಕಟ್ಟಡದ ಉನ್ನತೀಕರಣಕ್ಕೆ ನಾವೆಲ್ಲರೂ ಸಹಕರಿಸೋಣ ಎಂದು ತಿಳಿಸಿದರು.
ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಪ್ರೀತಾ ಬೌದ್ದಿಕ್ ನೀಡಿ ನಮ್ಮಲ್ಲಿ ಏನಾದರೂ ಬದಲಾವಣೆ ಮಾಡಲು ಸಾಧ್ಯವಾದರೆ ಇಂತಹ ಕಾರ್ಯಕ್ರಮ ಗಳು ಅರ್ಥಪೂರ್ಣವಾಗಲು ಸಾಧ್ಯವಿದೆ ಎಂದರು.
ಮಕ್ಕಳ ಹುಟ್ಟಹಬ್ಬವನ್ನು ಕೇಕ್ ಕತ್ತರಿಸಿ, ದೀಪ ಆರಿಸಿ ಆಚರಿಸುವ ಬದಲು ತುಪ್ಪದ ದೀಪ ಇಟ್ಟು, ಮನೆಯಲ್ಲೇ ತಯಾರಿಸಿದ ಸಿಹಿ ತಿನ್ನಿಸಿ, ಮಕ್ಕಳಿಂದಲೇ ಗಿಡಗಳನ್ನು ನೆಟ್ಟು, ದೇವಸ್ಥಾನದಲ್ಲಿ ಭಜನೆಯನ್ನು ನಡೆಸಿ ಅರ್ಥಪೂರ್ಣವಾಗಿ, ನಮ್ಮತನವನ್ನು ಉಳಿಸಿಕೊಂಡು.ಆಚರಿಸುವಂತೆ ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು, ಮಾತನಾಡಿ ಹಿಂದೂ ಸಂಸ್ಕೃತಿಯ ನ್ನು ಉಳಿಸಲು ಇಂತಹ ಕಾರ್ಯಕ್ರಮ ಅಗತ್ಯ. ನಮ್ಮದು ಕತ್ತರಿಸುವ ಸಂಸ್ಕತಿಯಲ್ಲ ಬದಲಾಗಿ ಸೂಜಿಯಂತೆ ಜೋಡಿಸುವ ಸಂಸ್ಕೃತಿ ಎಂದು ತಿಳಿಸಿದರು.
ಪ್ರಗತಿಪರ ಕೃಷಿಕ ಮೋಹನ್ ಅಗ್ರಬೈಲು ದೀಪ ಪ್ರಜ್ವಲಿಸಿದರು. ಕಾರ್ಯಾಧ್ಯಕ್ಷ ಇಂದಿರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ವಿದ್ಯಾಶ್ರೀ ಸ್ವಾಗತಿಸಿದರು. ಶಿಶು ಮಂದಿರದ ಅಧ್ಯಕ್ಷ ಪ್ರಸಾದ್ ಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.ಅನುಷಾ ಕಿಶೋರ್ ವಂದಿಸಿದರು. ಪವಿತ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ದೀಪ್ತಿ, ಮಾತಾಜಿ, ನೀತಾ ಮಾತಾಜಿ, ಕಾರ್ಯದರ್ಶಿ ಲಕ್ಷ್ಮಣ್ ಅಗ್ರಬೈಲು, ಪ್ರಮೋದ್ ಅಗ್ರಬೈಲು, ಮತ್ತಿತರರು ಸಹಕರಿಸಿದರು.