ಬಂಟ್ವಾಳ

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಬ್ರಹ್ಮರಥೋತ್ಸವ: ಕಾರ್ಯಕ್ರಮಗಳ, ವಾಹನ ನಿಲುಗಡೆ ವಿವರ

https://www.bantwalnews.com

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ರಥೋತ್ಸವ ಕಾರ್ಯಕ್ರಮಗಳು ಮಾರ್ಚ್ 2ರಿಂದ ಆರಂಭಗೊಂಡು 7ರವರೆಗೆ ನಡೆಯಲಿದೆ. ಕ್ರೋಧಿ  ನಾಮ ಸಂವತ್ಸರದ  ಫಾಲ್ಗುಣ ಶುದ್ಧ ತದಿಗೆ ಮಾ.2ರ ಭಾನುವಾರದಿಂದ ಫಾಲ್ಗುಣ ಶುದ್ಧ ಅಷ್ಟಮಿ ಶುಕ್ರವಾರ ಮಾ.7ವರೆಗೆ 201ನೇ ವರ್ಷದ ಬ್ರಹ್ಮರಥೋತ್ಸವವು ನಡೆಯಲಿದ್ದು  ಫೆ.28ರ ಶುಕ್ರವಾರ ಶ್ರೀ ದೇವರ ಬ್ರಹ್ಮರಥವನ್ನು ಹೊರಗೆ ತೆಗೆಯುವ ಕಾರ್ಯಕ್ರಮ ನಡೆಯಲಿದೆ.

https://www.opticworld.net/

ಮಾ.1ರ ಶನಿವಾರ, ಶ್ರೀ ದೇವರ ಮೃತ್ತಿಕಾರೋಹಣ, 2ರಂದು ಧ್ವಜಾರೋಹಣ, ಬೆಳ್ಳಿ  ಪಾಲ್ಕಿ ಹಗಲೋತ್ಸವ, ಗರುಡೋತ್ಸವ, 3ರಂದು ಬೆಳ್ಳಿ ಪಾಲ್ಕಿ ಹಗಲೋತ್ಸವ, ಹನುಮಂತೋತ್ಸವ, 4ರಂದು ಬೆಳ್ಳಿ ಲಾಲ್ಕಿ ಹಗಲೋತ್ಸವ, ಚಂದ್ರಮಂಡಲ ಉತ್ಸವ  5ರಂದು ಶ್ರೀ ದೇವರ ಮೂಲ ಪ್ರತಿಷ್ಠಾ ವರ್ದಂತಿ, ಪಟ್ಟದ ದೇವರಿಗೆ ಸ್ವರ್ಣ ಪೀಠ  ಸಮರ್ಪಣೆ, ಬೆಳ್ಳಿ  ಪಾಲ್ಕಿ ಹಗಲೋತ್ಸವ,ಜಲ ಕ್ರೀಡೆ, ಗೋಪುರೋತ್ಸವ, ಬೆಳ್ಳಿ ಲಾಲ್ಕಿ ಉತ್ಸವ,  ಬೆಳ್ಳಿ ರಥೋತ್ಸವ, 6ರಂದು ಬ್ರಹ್ಮ ರಥೋತ್ಸವ, 7ರಂದು ಅವಂಭೃತ ಉತ್ಸವ, ಧ್ವಜಾವರೋಹಣ ನಡೆಯಲಿದೆ

ವಾಹನಗಳನ್ನು ಇಲ್ಲಿ ನಿಲ್ಲಿಸಬಹುದು:

  • ಮಾರ್ಚ್ 2ರಿಂದ 7ರವರೆಗೆ 201ನೇ ವರ್ಷದ ಬ್ರಹ್ಮರಥೋತ್ಸವ ನಡೆಯಲಿದ್ದು, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾದ ಜಾಗಗಳಿವು.
  • ಮಂಗಳೂರು, ಪುತ್ತೂರು, ಉಪ್ಪಿನಂಗಡಿ ಕಡೆಯಿಂದ ಬರುವವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹಿಂಬದಿಯ ಜಾಗದಲ್ಲಿ ಹಾಗೂ ದೇವಳದ ಸಮೀಪ ಇರುವ ಶಾಲಾ ರಸ್ತೆಯ ಮೂಲಕ ಎಸ್ ವಿ ಎಸ್ ದೇವಳದ ವಿದ್ಯಾ ಸಂಸ್ಥೆಯ ವಠಾರದಲ್ಲಿ ನಿಲ್ಲಿಸುವಂತೆ ವಿನಂತಿಸಲಾಗಿದೆ
  • ಮೂಡಬಿದರೆ, ಕಾರ್ಕಳ, ಕಡೆಯಿಂದ ಬರುವ ವಾಹನಗಳು ಬೈಪಾಸ್ ಜಂಕ್ಷನ್ ನಿಂದ ಬಂಟ್ವಾಳ ಪೇಟೆ ರಸ್ತೆಯಲ್ಲಿ ದೇವರಕಟ್ಟೆಯ ಬಸ್ ನಿಲ್ದಾಣದಲ್ಲಿ ಹಾಗೂ ಅದರ ಎದುರು ಇರುವ ವಿಶಾಲ ಮೈದಾನದಲ್ಲಿ ವಾಹನವನ್ನು ನಿಲ್ಲಿಸುವಂತೆ ವಿನಂತಿಸಲಾಗಿದೆ
  • ಪುಂಜಾಲ್ ಕಟ್ಟೆ, ಗುರುವಾಯನಕೆರೆ, ಬೆಳ್ತಂಗಡಿ ಉಜಿರೆ ಕಡೆಯಿಂದ ಬರುವ ಭಕ್ತಾದಿಗಳು ಜಕ್ರಿಬೆಟ್ಟಿನಿಂದ ಬಂಟ್ವಾಳ ಪೇಟೆಯ ರಸ್ತೆ ಯಿಂದ ಕೊಟ್ರಮಣಗಂಡಿ ಮೂಲಕ ದೇವರಕಟ್ಟೆಯ ಬಸ್ ನಿಲ್ದಾಣ ಹಾಗೂ ಅದರ ಎದುರು ಇರುವಂಥ ವಿಶಾಲ  ಮೈದಾನದಲ್ಲಿ ನಿಲ್ಲಿಸುವಂತೆ ವಿನಂತಿಸಲಾಗಿದೆ

ವಾಹನ ನಿಲುಗಡೆಗೆ ನಿಷೇಧ:

  • ಬ್ರಹ್ಮರಥೋತ್ಸವ ಮಾ.2ರಿಂದ 7ರವರೆಗೆ ನಡೆಯಲಿದ್ದು, ಬಂಟ್ವಾಳ ಪೋಸ್ಟ್ಆಫೀಸ್‌ನಿಂದ ಪೂರ್ಣಿಮಾ ಸ್ಟೋರ್ ವರೆಗೆ ರಸ್ತೆ ಎರಡೂ ಬದಿಯಲ್ಲಿ ಯಾವುದೇ
  • ವಾಹನವನ್ನು ನಿಲ್ಲಿಸುವುದನ್ನು ನಿಷೇಧಿಸಲಾಗಿದೆ ಹಾಗಾಗಿ ದೇವಳದ ಕಡೆಯಿಂದ ಹಾಗೂ ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿಯೇ ತಮ್ಮ  ವಾಹನವನ್ನು ನಿಲ್ಲಿಸಿ ಸಹಕರಿಸಬೇಕಾಗಿ ದೇವಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ