PRESS MEET
ರೋಟರಿ ಜಿಲ್ಲೆ ೩೧೮೧ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಒಳಗೊಂಡಿದ್ದು, ಉತ್ತಮ ಜನೋಪಯೋಗಿ ಕೆಲಸಗಳನ್ನು ಮಾಡಿದೆ, ಅವುಗಳ ಪೈಕಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಆರಂಭಿಸಲಾದ ಹ್ಯೂಮನ್ ಮಿಲ್ಕ್ ಬ್ಯಾಂಕ್ ಪ್ರಮುಖವಾದದ್ದು ಏಂದು ಜಿಲ್ಲಾ ಗವರ್ನರ್ ವಿಕ್ರಮ್ ದತ್ತಾ ಹೇಳಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸರ್ವೈಕಲ್ ಕ್ಯಾನ್ಸರ್ ಮಾಹಿತಿ, ಹಿರಿಯರಿಗೆ ಗಾಲಿಕುರ್ಚಿ ಸಹಿತ ಸಾಧನಗಳ ವಿತರಣೆ, ಬ್ಲಡ್, ಐ ಬ್ಯಾಂಕ್ ಗಳು, ಚರ್ಮ ಬ್ಯಾಂಕ್ ಸಹಿತ ಹಲವು ಆರೋಗ್ಯ ಸಂಬಂಧಿ ಯೋಜನೆಗಳನ್ನು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಿಸಲಾಗಿದೆ. ಬಂಟ್ವಾಳ ಕ್ಲಬ್ ಬೇಬಿ ಕುಂದರ್ ಅಧ್ಯಕ್ಷತೆಯಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು.
https://www.opticworld.net/
ಈ ಸಂದರ್ಭ ಮಾತನಾಡಿದ ಬಂಟ್ವಾಳ ರೋಟರಿ ಅಧ್ಯಕ್ಷ ಬೇಬಿ ಕುಂದರ್, ಗವರ್ನರ್ ಭೇಟಿ ವೇಳೆ ಪೊಳಲಿ ಸರಕಾರಿ ಶಾಲಾ ಕೊಠಡಿಗೆ ೨.೫ ಲಕ್ಷ, ನರಿಕೊಂಬು ಶಾಲಾ ಅಡುಗೆ ಕೊಠಡಿ ಮೇಲ್ಛಾವಣಿಗೆ ೨.೫ ಲಕ್ಷ, ಅಂತರ್ತರಗತಿ ಧ್ವನಿವರ್ಧಕಕ್ಕೆ ೩ ಲಕ್ಷ ರೂ ನೆರವು ನೀಡಲಾಗಿದ್ದು, ಕಳೆದ ೫೫ ವರ್ಷಗಳಲ್ಲಿ ತನ್ನದೇ ವೈಶಿಷ್ಟ್ಯಮಯ ಚಟುವಟಿಕೆಗಳಿಂದ ಸಮಾಜಮುಖಿಯಾಗಿದೆ ಎಂದರು.
ರೋಟರಿ ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗಾ, ಜೋನಲ್ ಲೆಫ್ಟಿನೆಂಟ್ ಪುಷ್ಪರಾಜ್ ಹೆಗ್ಡೆ, ರೋಟರಿ ಬಂಟ್ವಾಳ ಜೊತೆ ಕಾರ್ಯದರ್ಶಿ ವೀರೇಂದ್ರ ಅಮೀನ್ ಹಾಗೂ ಪೂರ್ವಾಧ್ಯಕ್ಷ ಕೆ.ನಾರಾಯಣ ಹೆಗ್ಡೆ ಉಪಸ್ಥಿತರಿದ್ದರು.
PRESS MEET
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)