ಬಂಟ್ವಾಳ

ಹೈಟೆಕ್ ಹಾರ್ವೆಸ್ಟರ್ ಹಬ್ ಸ್ಥಾಪನೆ: ಶೇ.50ರ ಸಹಾಯಧನದಲ್ಲಿ ಯಂತ್ರೋಪಕರಣ ವಿತರಣೆ

https://www.opticworld.net/

ಜಾಹೀರಾತು

ರಾಜ್ಯ ಸರಕಾರದ 2024-25ನೇ ಸಾಲಿನ ಕೃಷಿ ಪರಿಕರಗಳು ಮತ್ತು ಗುಣನಿಯಂತ್ರಣ ಯೋಜನೆಯಡಿ, ಶೇ.50ರ ಸಹಾಯಧನದಲ್ಲಿ ಒಟ್ಟು 27.25 ಲಕ್ಷ ರೂ ಅನುದಾನದಲ್ಲಿ ಹೈಟೆಕ್ ಹಾರ್ವೆಸ್ಟರ್ ಹಬ್ ಕಾರ್ಯಕ್ರಮದಡಿ, ಹಾರ್ವೆಸ್ಟರ್ ಹಬ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲನೆಯದ್ದಾಗಿ ಬಂಟ್ವಾಳ ತಾಲೂಕಿನಲ್ಲಿ ಸ್ಥಾಪನೆಯಾಗಲಿದೆ. ಬಂಟ್ವಾಳ ಕಸ್ಬಾ ಗ್ರಾಮದ ಮೇತಿಕೆದು ನಿವಾಸಿ ಪಶುಪತಿ ಗೌಡ ಅವರಿಗೆ 2 ಕಂಬೈನ್ಡ್ ಭತ್ತ ಕಟಾವು ಯಂತ್ರ ಹಾಗೂ 3 ಭತ್ತ ಹುಲ್ಲು ಕಂತೆ ಮಾಡುವ ಬೇಲರ್ ಯಂತ್ರಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಂಗಳವಾರ ಬಂಟ್ವಾಳ ಬಿ.ಸಿ.ರೋಡಿನ ಕೃಷಿ ಇಲಾಖೆ ಕಚೇರಿ ಸಮೀಪ ವಿತರಿಸಿದರು.

ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಶೇ.90ರ ಸಹಾಯಧನದಲ್ಲಿ 11 ಮಂದಿ ರೈತರಿಗೆ ತುಂತುರು ನೀರಾವರಿ ಘಟಕಗಳನ್ನು, ಕೇಂದ್ರ ಕೃಷಿ ಯಂತ್ರೋಪಕರಣ ಉಪ ಅಭಿಯಾನ ಯೋಜನೆಯಡಿ 7 ರೈತರಿಗೆ ಪವರ್ ವೀಡರ್ ಮತ್ತು ಓರ್ವ ಫಲಾನುಭವಿಗೆ ಶೇ.50ರ ಸಹಾಯಧನದಲ್ಲಿ ಪವರ್ ಸ್ಪ್ರೇಯರ್ ಅನ್ನು ಇದೇ ವೇಳೆ ವಿತರಿಸಲಾಯಿತು.ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕರಾದ ಕುಮುದಾ, ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್‌, ಕೃಷಿ ಅಧಿಕಾರಿ ನಂದನ್‌ ಶೆಣೈ ಪಿ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

5 hours ago