ಬೆಂಗಳೂರಿನ ಶ್ರೀ ವಿಜಯ ಚಂದ್ರಿಕೆ ಸಂಗೀತ ಸದನ ಮತ್ತು ಸಂಗಿತ ಧಾಮ ಮ್ಯೂಸಿಕ್ ಅಕಾಡೆಮಿ ಆಶ್ರಯದಲ್ಲಿ ನವ ಭಾವ ಜೀವ ಭಾವಗೀತೆಗಳ ಗಾಯನ ಮತ್ತು ಅಮ್ಮ ನೀ ಅಮೃತಧಾರೆ ಹೆಸರಿನ ಭಾವಗೀತೆಗಳ ಧ್ವನಿ ಮುದ್ರಿಕೆ ಫೆ. 23ರಂದು ಸಂಜೆ 4ಕ್ಕೆ ಬೆಂಗಳೂರಿನ ಎನ್.ಆರ್. ಕಾಲೊನಿಯ ಬಿ.ಎಂ.ಶ್ರೀ ಪ್ರತಿಷ್ಠಾನದ ಆವರಣದಲ್ಲಿ ನಡೆಯಲಿದೆ.
ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ನಿರ್ದೇಶನದಲ್ಲಿ ಪತ್ರಿಕಾ ಛಾಯಾಗ್ರಾಹಕ, ಲೇಖಕ ಚಂದ್ರಹಾಸ ಕೋಟೆಕಾರ್ ಮತ್ತು ಕವಯಿತ್ರಿ ಉಮಾದೇವಿ ಚಿಪ್ಳೂಣ್‌ಕರ್ ಅವರ ರಚನೆಯ ಗೀತೆಗಳು ಅಮ್ಮ ನೀ ಅಮೃತಧಾರೆ ಹೆಸರಿನ ಧ್ವನಿಮುದ್ರಿಕೆಯಲ್ಲಿ ಬಿಡುಗಡೆಗೊಳ್ಳಲಿವೆ. ಬಳಿಕ ಸಂಗೀತಧಾಮ ತಂಡದಿಂದ ದೊಡ್ಡವಾಡ ಅವರ ನಿರ್ದೇಶನದಲ್ಲಿ ಭಾವಗೀತೆಗಳ ಗಾಯನ ನಡೆಯಲಿದೆ.
ಕವಿ ಡಾ.ದೊಡ್ಡರಂಗೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಧ್ವನಿಮುದ್ರಿಕೆ ಜ್ಯೂಕ್ ಬಾಕ್ಸ್‌ನ್ನು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಬಿಡುಗಡೆಗೊಳಿಸಲಿದ್ದಾರೆ.
ದೊಡ್ಡವಾಡ ಅವರೊಂದಿಗೆ ಶ್ರೀಧರ ಅಯ್ಯರ್, ಪಿ.ಆರ್. ಶ್ರೀನಿವಾಸನ್, ನಾಗರಾಜ್, ಆಶಾಂಕ ಬಾದಾಮಿ, ಅಪರ್ಣಾ ನರೇಂದ್ರ, ಕಾವ್ಯಾ ಕಾಮತ್, ಸಿರಿ ಚಂದ್ರಶೇಖರ್, ನಿವೇದಿತಾ ಹಾಗೂ ವಿಸ್ಮಯಾ ಅವರು ಗಾಯನದಲ್ಲಿ ಭಾಗವಹಿಸಲಿದ್ದಾರೆ.