Uncategorized

ಫೆಬ್ರವರಿ 22ರಂದು ಮಿತ್ತಬೈಲ್ ಉರೂಸ್

https://www.opticworld.net/

ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ನ ಮುಹಿಯ್ಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯವಿಶ್ರಾಂತಿ ಹೊಂದಿ ಅನೇಕ ಪವಾಡಗಳಿಂದ ಇತಿಹಾಸ ಪ್ರಸಿದ್ದರಾದ ಹಝ್ರತ್ ಶೈಖ್ ವಲಿಯುಲ್ಲಾಹಿ (ಖ.ಸಿ) ರವರ ಹೆಸರಿನಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಮಖಾಂ ಉರೂಸ್‌ ಫೆ. 22  ಶನಿವಾರದಂದು ನಡೆಯಲಿದೆ ಎಂದು ಮಿತ್ತಬೈಲ್ ಮುಹಿಯ್ಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಅದ್ದೇಡಿ ತಿಳಿಸಿದರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಉರೂಸ್ ಕಾರ್ಯಕ್ರಮವು ಸಮಸ್ತ ಕೇರಳ ಜಂಇಯ್ಯತುಲ್ ಉಲೆಮಾ ಅಧ್ಯಕ್ಷರು ಹಾಗೂ ಮಿತ್ತಬೈಲ್ ಖಾಝಿಯವರಾದ ಬಹು ಸಯ್ಯದುಲ್ ಉಲೆಮಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್‌ ಕಾರ್ಯಕ್ರಮದ ನೇತೃತ್ವದಲ್ಲಿ ನಡೆಯಲಿರುವುದು. ಈ ಪ್ರಯುಕ್ತ ಪೆ.14 ರಿಂದ  22 ರ ತನಕ ಪ್ರಸಿದ್ದ ವಿದ್ವಾಂಸರುಗಳಿಂದ ಧಾರ್ಮಿಕ ಮತ ಪ್ರಬಾಷಣ ನಡೆಯಲಿರುವುದು ಎಂದವರು ತಿಳಿಸಿದರು.

ಪೆ. 14 ರಂದು ರಾತ್ರಿ 8.30 ಕ್ಕೆ ಮಂಗಳೂರು ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉರೂಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಿತ್ತಬೈಲ್ ಮುದರ‍್ರಿಸ್  ಉಮರುಲ್ ಫಾರೂಖ್ ಫೈಝಿ ದುಆ ನೆರವೇರಿಸುವರು. ಮುಹಿಯ್ಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ  ಹಾಜಿ ಮುಹಮ್ಮದ್ ಅದ್ದೇಡಿ ಅಧ್ಯಕ್ಷತೆ ವಹಿಸುವರು. ಮಿತ್ತಬೈಲ್ ಜುಮಾ ಮಸೀದಿ ಖತೀಬ್ ಕೆ.ಎಂ.ಅಬ್ಬಾಸ್ ಫೈಝಿ ಹಾಗೂ ಶೈಖುನಾ ಪಿ.ಪಿ.ಉಮರ್ ಮುಸ್ಲಿಯಾರ್ ಕೊಯ್ಯೂಡ್  ಮುಖ್ಯ ಪ್ರಭಾಷಣ ನಡೆಸಲಿದ್ದು,  ಇರ್ಶಾದ್ ದಾರಿಮಿ ಅಲ್ ಜಝ್ಹರಿ ಮಿತ್ತಬೈಲ್ ಪ್ರಸ್ತಾವಿಕ ಭಾಷಣ ಮಾಡಲಿರುವರು ಎಂದವರು ವಿವರಿಸಿದರು.

ಪ್ರತಿದಿನ ರಾತ್ರಿ ವಿದ್ವಾಂಸರುಗಳಾದ ಖಲೀಲ್ ಹುದವಿ ಕಾಸರಗೋಡು, ಅನ್ವರ್ ಮುಹೀನುದ್ದೀನ್ ಹುದವಿ,  ಅಬೂಬಕ್ಕರ್ ಸಿದ್ದೀಕ್ ಜಲಾಲಿ ಕಕ್ಕಿಂಜೆ ,  ಹಾಫಿಲ್ ಅನ್ವರ್ ಮನ್ನಾನಿ ತೊಡುಪ್ಪುಯ, ಇಕ್ಬಾಲ್ ದಾರಿಮಿ ಕೊಲ್ಲಂ ಮೇಲಾಟ್ಟೂರ್, ಅಶ್ಫಾಕ್ ಫೈಝಿ ನಂದಾವರ,  ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಧಾರ್ಮಿಕ ಪ್ರವಚನ ನೀಡಲಿದ್ದು, ಪ್ರತೀ ದಿನದ ಕಾರ್ಯಕ್ರಮಗಳಲ್ಲಿ ಸಾದಾತುಗಳಾದ, ಅಸ್ಸಯ್ಯದ್ ಝೈನುಲ್ ಅಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ, , ಸಯ್ಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ, ಶೈಖುನಾ ಉಸ್ಮಾನ್ ಫೈಝಿ ತೋಡಾರು, ಶೈಖುನಾ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು, ಸಯ್ಯದ್ ಅಲೀ ತಂಙಳ್ ಕುಂಬೋಳ್, ಇವರುಗಳು ದುವಾಃ ಅಶೀರ್ವಚನ ನೀಡಲಿದ್ದಾರೆ ಎಂದರು.

ಪೆ.16 ರಂದು ಅಸ್ಸೆಯ್ಯದ್ ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ನೇತೃತ್ವದಲ್ಲಿ ದ್ಸಿಕ್ರ್ ಮಜ್ಲಿಸ್, ಪೆ.20 ರಂದು ಶೈಖುನಾ ಅಬ್ದುಲ್‌ಖಾದರ್‌ಅಲ್ ಖಾಸಿಮಿ ಬಂಬ್ರಾಣ‌ ಉಸ್ತಾದ್ ಇವರುಗಳ ನೇತೃತ್ವದಲ್ಲಿ ಮಜ್ಲಿಸುನ್ನೂರು ಕಾಯ೯ಕ್ರಮ  ನಡೆಯಲಿದೆ, ಹಾಗೂ ಪೆ. 22 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮದ ಅಂಗವಾಗಿ ಸಂಜೆ 4.30 ಕ್ಕೆ ಉರೂಸ್ ಕಮಿಟಿ ಅಧ್ಯಕ್ಷ  ಹಾಜಿ ಮುಹಮ್ಮದ್ ಅದ್ದೇಡಿ  ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು,  ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ  ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ , ವಖ್ಫ್ ಸಚಿವ ಜನಾಬ್ ಬಿ.ಝಡ್ ಝಮೀರ್ ಅಹಮದ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ರಮಾನಾಥ ರೈ, ಮೊಡಂಕಾಪು ಚರ್ಚ್ ನ ಮುಖ್ಯ ಧರ್ಮಗುರು ರೆ| ಫಾ| ವಲೇರಿಯನ್ ಡಿ’ಸೋಜ

ಪ್ರಮುಖರಾದ ಬಿ.ಕೆ.ಹರಿಪ್ರಸಾದ್,  ಯ.ಟಿ.ಇಫ್ತಿಕಾರ್ ಅಹ್ಮದ್ ಆಲಿ, ಪುರಸಭಾಧ್ಯಕ್ಷ ವಾಸು ಪೂಜಾರಿ, ಬೇಬಿ ಕುಂದರ್,  ಇನಾಯತ್ ಆಲಿ ಜನಾಬ್ ಬಿ.ಎಂ. ಶರೀಫ್, ಮೂನೀಸ್ ಆಲಿ,   ಎಸ್.ಮುಹಮ್ಮದ್ ಶೆರೀಫ್ ,  ಹಸೈನಾರ್ ತಾಳಿಪಡ್ಪು, , ಮುಹಮ್ಮದ್ ಶರೀಫ್, ಮುಹಮ್ಮದ್ ನಂದರಬೆಟ್ಟು, ಲುಕ್ಮಾನ್ ಕೈಕಂಬ, ರಾಮಕೃಷ್ಣ ಆಳ್ವ, ಲೋಲಾಕ್ಷ ಶೆಟ್ಟಿ, ಮೈಸೂರು, ರಿಯಾಝ್ ಫರಂಗಿಪೇಟೆ,  ಅಬ್ದುಲ್ ಲತೀಫ್ ಗುರುಪುರ,  ಅಬ್ದುಲ್ ಹಮೀದ್ ಬಿ.ಎ., ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲ್, ಬಿ.ಎ. ಅಬ್ದುಲ್ ಸಲಾಂ ತುಂಬೆ. ಹಾಜಿ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್,  ಅಬೂಬಕ್ಕರ್, ಅಮಾನುಲ್ಲಾ ಬಂಟ್ವಾಳ, ವಿಜಯ ಪ್ರಸಾದ್ ,  ಅಬ್ಬಾಸ್ ವಳಾಲು, ಡಾ. ಅಬ್ದುಲ್ ಬಶೀರ್, ಅನಂತ ಪದ್ಮನಾಭ,  ಸತೀಶ್, ಹಂಝ ಬಸ್ತಿಕೋಡಿ, ಮುಹಮ್ಮದ್ ನಾಸಿರ್,  ಲಿಯೋ ಫೆರ್ನಾಂಡಿಸ್, ಇಸಾಕ್ ಪಲ್ಲಮಜಲು,  ಸಿದ್ದೀಖ್ ಮಿತ್ತಬೈಲ್, ರಫೀಕ್ ಹುದವಿ ಕೋಲಾರಿ, ಉಬೈದುಲ್ಲಾ ಅಝ್ಹರಿ, ಹಬೀಬು ರಹ್ಮಾನ್, ಮೊಯ್ದಿನ್ ಹಾಜಿ, ಇಬ್ರಾಹೀಂ ಮುಸ್ಲಿಯಾರ್ ಕುಮೇರು ಮುಂತಾದ ಗಣ್ಯರು ಬಾಗವಹಿಸಲಿದ್ದಾರೆ ಎಂದರು.

PRESS MEET

ಅದೇ ದಿನ ರಾತ್ರಿ 9.00 ಕ್ಕೆ ಮಿತ್ತಬೈಲ್‌ ಖಾಝಿ ಸೆಯ್ಯದುಲ್‌ ಉಲೆಮಾ ಅಸ್ಸೆಯ್ಯದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್‌ ದು:ಹಾಶೀರ್ವಚನಗೈಯಲಿದ್ದು, ಅಬ್ದುಲ್ ಅಝಿಝ್ ಅಶ್ರಫಿ ಪಾನತ್ತೂರು ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ. ಹಾಗೂ ಹಲವಾರು ಉಲೆಮಾ, ಉಮರಾ, ಸಾದಾತುಗಳು, ಸೂಫಿವರ್ಯರು, ಸಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ, ರಾತ್ರಿ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಜುಮಾ ಮಸೀದಿ ಪ್ರಧಾನ ಕಾರ್ಯದಶಿ೯ ಅಕ್ಬರ್ ಆಲಿ ಪೊನ್ನೋಡಿ ಉಪಾಧ್ಯಕ್ಷ ಜಮಾಲುದ್ದೀನ್,  ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಉರೂಸ್ ಕಮಿಟಿ ಉಪಾಧ್ಯಕ್ಷ ಡಿ.ಪಿ.ಸಿದ್ದೀಕ್ ಹಾಜಿ ಉಪಸ್ಥಿತರಿದ್ದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts

ಇರಬೇಕಾದದ್ದು ಇಪ್ಪತ್ತೇಳು, ಇರೋದು ಒಬ್ಬರೇ!!

| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)

12 hours ago