filter: 0; fileterIntensity: 0.0; filterMask: 0; hdrForward: 0; highlight: true; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 39;
ತಮ್ಮ ಬೇಡಿಕೆಗಳು ಈಡೇರದ ಕಾರಣ, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಮತ್ತೆ ಮುಷ್ಕರ ಆರಂಭವಾಗಿದೆ.
ಮುಷ್ಕರನಿರತರು
ರಾಜ್ಯವ್ಯಾಪಿ ಮುಷ್ಕರದ ಕರೆಯಂತೆ ಬಂಟ್ವಾಳಲ್ಲೂ ಗ್ರಾಮಾಡಳಿತಾಧಿಕಾರಿಗಳ ಸಂಘದ ಪ್ರಮುಖರಾದ ಅನಿಲ್ ಕೆ. ಪೂಜಾರಿ ಸಹಿತ ಸಂಘದ ಸದಸ್ಯರು ಮುಷ್ಕರ ಕುಳಿತರು. ಕಳೆದ ವರ್ಷ ಮುಷ್ಕರ ನಡೆಸಿದ ಸಂದರ್ಭ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.
https://www.opticworld.net/
ಆದರೆ ಯಾವುದೇ ತೃಪ್ತಿಕರ ಕ್ರಮಗಳನ್ನು ಅನುಸರಿಸಿಲ್ಲ. ೀ ಹಿನ್ನೆಲೆಯಲ್ಲಿ ಮತ್ತೆ ರಾಜ್ಯವ್ಯಾಪಿ ಮುಷ್ಕರವನ್ನು ಅನಿರ್ದಿಷ್ಟಾವಧಿಗೆ ಆರಂಭಿಸಲಾಗಿದೆ. ಬಂಟ್ವಾಳ ತಾಲೂಕು ಗ್ರಾಮಾಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಅನಿಲ್ ಕೆ. ಪೂಜಾರಿ, ಗೌರವಾಧ್ಯಕ್ಷ ಎಂ.ಪ್ರವೀಣ್ ಕುಮಾರ್, ಉಪಾಧ್ಯಕ್ಷ ಕರಿಬಸಪ್ಪ ನಾಯ್ಕ್, ಖಜಾಂಚಿ ವೈಶಾಲಿ ಉಪಸ್ಥಿತರಿದ್ದರು. ಮೂರು ದಿನಗಳ ಕಾಲ ತಾಲೂಕು ಕಚೇರಿ ಎದುರು, ಬೇಡಿಕೆ ಈಡೇರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ, ಅಲ್ಲೂ ಸಮಸ್ಯೆಗೆ ಪರಿಹಾರ ದೊರಕದಿದ್ದರೆ, ಬೆಂಗಳೂರಿನ ಫ್ರೀಡಂ ಪಾರ್ಕ್ ಮುಂಭಾಗ ಮುಷ್ಕರ ನಡೆಸಲಾಗುವುದು ಎಂದು ಅನಿಲ್ ಕೆ ಪೂಜಾರಿ ತಿಳಿಸಿದ್ದಾರೆ.
ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)