https://www.opticworld.net/
ಗೂಡಿನಬಳಿಯಲ್ಲಿರುವ ಬಿ.ಮೂಡ ಪಿ.ಯು. ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಶನ್ ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ನಡೆಯಿತು.
ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮಾಹಿತಿ ಕಾರ್ಯಾಗಾರವನ್ನು ಪ್ರೊ.ಡಾ. ಸಂಗೀತಾ ಕೆ. ನಡೆಸಿಕೊಟ್ಟರು. ರೋಟರಿ ಟೌನ್ ಅಧ್ಯಕ್ಷ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಾಯಕ ಗವರ್ನರ್ ಮೊಹಮ್ಮದ್ ವಳವೂರ್ , ವಲಯ ಸೇನಾನಿ ಪುಷ್ಪರಾಜ್ ಹೆಗ್ಡೆ, ಫೋಟೋಗ್ರಾಫರ್ಸ್ ಅಸೋಸಿಯೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ರೋಟರಿ ಕಾರ್ಯದರ್ಶಿ ನಾರಾಯಣ ಸಿ ಪೆರ್ಣೆ, ಎಸ್ ಕೆ ಪಿ ಎ ಬಂಟ್ವಾಳ ವಲಯದ ಕಾರ್ಯದರ್ಶಿ ಪ್ರಶಾಂತ್ ಕಲ್ಲಡ್ಕ, ಉಪನ್ಯಾಸಕ ದಾಮೋದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಫೊಟೋಗ್ರಾಫರ್ ಸಂಘದ ಹರೀಶ್ ಕುಂದರ್, ರಾಜರತ್ನ, ವಿಕ್ರಮ್, ರಾಜೇಂದ್ರ, ಮಹೇಶ್ ಶೆಟ್ಟಿ, ಶರತ್ ಕಲ್ಲಡ್ಕ ಭಾಗಿಯಾಗಿದ್ದರು