ಜೇಸಿ ಜೋಡುಮಾರ್ಗ ನೇತ್ರಾವತಿ ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ನಡೆಯಿತು.ರೋಟರಿ ಟೌನ್ ಅಧ್ಯಕ್ಷ ಕಿಶೋರ್ ಕುಮಾರ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಇದರ ಪ್ರಸ್ತುತತೆ ಕುರಿತು ವಿವರಿಸಿದರು.
ಜೋಡುಮಾರ್ಗ ಜೇಸಿ ಅಧ್ಯಕ್ಷೆ ತೃಪ್ತಿ ಪಿ. ಅವರು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.ಈ ಸಂದರ್ಭ ಕಾರ್ಯಕ್ರಮ ಸಂಯೋಜಕ ಹರಿಶ್ಚಂದ್ರ ಆಳ್ವ, ರೋಟರಿ ಕ್ಲಬ್ ನಿಕಟಪೂರ್ವಾಧ್ಯಕ್ಷ ಸುರೇಶ್ ಸಾಲಿಯಾನ್, ಜತೆ ಕಾರ್ಯದರ್ಶಿ ನಾಗೇಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಜೇಸಿ ಕಾರ್ಯದರ್ಶಿ ಪ್ರಗತಿ ಕೆ. ವಂದಿಸಿದರು.
| ಬಂಟ್ವಾಳ ಕೃಷಿ ಇಲಾಖೆಯ ಪರಿಸ್ಥಿತಿ | ಒಬ್ಬರಷ್ಟೇ ಕಾಯಂ ಅಧಿಕಾರಿ | ಮೂರು ವರ್ಷಗಳಿಂದ ನೇಮಕಾತಿ ಇಲ್ಲ (more…)