ಮೆಲ್ಕಾರ್ ನ ತರಕಾರಿ ವ್ಯಾಪಾರಿ ಮಹಮ್ಮದ್ ಶರೀಫ್ ಹಲವು ಶಾಲೆಗಳಿಗೆ ಉಚಿತವಾಗಿ ಸುಮಾರು ಎಂಟಕ್ಕೂ ಅಧಿಕ ವರ್ಷಗಳಿಂದ ತರಕಾರಿಯನ್ನು ಉಚಿತವಾಗಿ ನೀಡುತ್ತಿರುವ ವಿಚಾರ ಗೊತ್ತೇ ಇದೆ. ಇದೀಗ ಗೋವಾದ ಪಣಜಿಯಲ್ಲಿ ಭಾರತ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಬೆಂಗಳೂರಿನ ಸಾಂತ್ವನ ಫೌಂಡೇಶನ್ ಹಾಗೂ ಪಣಜಿಯ ಕಲ್ಲಂಗುಟಿ ಕನ್ನಡ ಸಂಘ ಸಹಯೋಗದಲ್ಲಿ ನಡೆದ ಸಮಾರಂಭದಲ್ಲಿ ಮಹಮ್ಮದ್ ಶರೀಫ್ ಅವರ ಸೇವೆಯನ್ನು ಪರಿಗಣಿಸಿ, ಪ್ರಶಸ್ತಿ ಪ್ರದಾನ ಮಾಡಲಾಯಿತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ,ಸಾಂತ್ವನ ಫೌಂಡೇಶನ್ ಅಧ್ಯಕ್ಷರಾದ ಡಾ. ಪವಿತ್ರ ರೆಡ್ಡಿ. ಕಲ್ಲಂಗುಟ್ ಕನ್ನಡ ಸಂಘದ ಅಧ್ಯಕ್ಷರಾದ ಮುರಳಿ ಮೋಹನ್ ಶೆಟ್ಟಿ. ಮತ್ತು ಹಿನ್ನೆಲೆ ಗಾಯಕರಾದ ಬದರಿ ಪ್ರಸಾದ್ ಹಾಗೂ ಕಾರ್ಯಕ್ರಮದ ಆಯೋಜಕರಾದ ಮಾರುತಿ ಬಡಿಗೇರ್ ವೇದಿಕೆಯಲ್ಲಿದ್ದರು.