ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಚಂದ್ರಮ ಕಲಾ ಮಂಟಪದಲ್ಲಿ ಭಾನುವಾರ ಬೆಳಗ್ಗೆ ಆಕಾಶವಾಣಿ ಕಲಾವಿದ ಮೌನೇಶ್ ಕುಮಾರ್ ಛಾವಣಿ ಅವರ ಉದಯಗಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
.
ಬಂಟ್ವಾಳದ ವೈದ್ಯದಂಪತಿ ಡಾ. ವಿಜಯ್ ತೋಳ್ಪಾಡಿ ಹಾಗೂ ಡಾ.ವೀಣಾ ತೋಳ್ಪಾಡಿ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ 6ರಿಂದ 8ರವರೆಗೆ ದಾಸಸಾಹಿತ್ಯ ಸಹಿತ ಹಲವು ಕೃತಿಗಳನ್ನು ಮೌನೇಶ್ ಕುಮಾರ್ ಛಾವಣಿ ಪ್ರಸ್ತುತಪಡಿಸಿದರು. ಈ ಸಂದರ್ಭ ತಬಲಾದಲ್ಲಿ ಗೌತಮ್ ಜಪ್ಪಿನಮೊಗರು, ಕೊಳಲಿನಲ್ಲಿ ಲೋಕೇಶ್ ಸಂಪಿಗೆ, ತಾನ್ ಪುರದಲ್ಲಿ ಭಾರತೀಶ್ ಛಾವಣಿ ಸಾಥ್ ನೀಡಿದರು. ಕಲಾವಿದರನ್ನು ಹಿರಿಯ ವೈದ್ಯ ಡಾ. ಎಂ.ಎಸ್. ಭಟ್ ಗೌರವಿಸಿದರು. ಈ ಸಂದರ್ಭ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಹಾಗೂ ನಿರ್ದೇಶಕರಾದ ಡಾ. ಆಶಾಲತಾ ಸುವರ್ಣ ಉಪಸ್ಥಿತರಿದ್ದರು.