ಬಂಟ್ವಾಳ: ಮೆಲ್ಕಾರ್ ನಲ್ಲಿ ಬೀಟ್ ಕರ್ತವ್ಯ ನಿರ್ವಹಿಸುತ್ತಿರುವ ಬಂಟ್ವಾಳದ ಪೊಲೀಸ್ ಸಿಬ್ಬಂದಿ ಗಣೇಶ್ ನೆಟ್ಲ ಅವರ ಮುತುವರ್ಜಿಯಿಂದ ದಾನಿಗಳ ಸಹಕಾರದೊಂದಿಗೆ ಮೆಲ್ಕಾರ್ ನ ಜಂಕ್ಷನ್ ನಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮೆಲ್ಕಾರ್ ಜಂಕ್ಷನ್ ನಲ್ಲಿ ಸಾಕಷ್ಟು ವಾಹನಗಳ ಓಡಾಟವಿದ್ದು, ಅಪರಾಧ, ಅಪಘಾತ ಸಂದರ್ಭ ಸಿಸಿ ಟಿವಿ ಕ್ಯಾಮರಾ ಬಹಳಷ್ಟು ಸಹಕಾರಿಯಾಗಿರುತ್ತದೆ.