ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಶ್ರೀ ಗುರುಶಿವ ಕ್ಷೇತ್ರದಲ್ಲಿ ವರ್ಕಾಡಿ ಶಂಕರ ಅಲೆವೂರಾಯರ ನೇತೃತ್ವದಲ್ಲಿ ಜನವರಿ 25ರಂದು ಭಜನಾ ಮಂಗಲೋತ್ಸವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಬೆಳಗ್ಗೆ 7ಗಂಟೆಗೆ ಧ್ವಜಾರೋಹಣ, 7.30ಕ್ಕೆ ಭಜನೆ ಆರಂಭ, 9.30ಕ್ಕೆ 48 ಕಾಯಿ ಗಣಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5.30ಕ್ಕೆ ಭಜನಾ ಮಹೋತ್ಸವ, ರಾತ್ರಿ 6.30ಕ್ಕೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಉಳ್ಳಾಕುಲು ಅಣ್ಣತಮ್ಮಂದಿರು, ಮಲರಾಯ ದೈವಗಳಿಗೆ ನೇಮೋತ್ಸವ, ರಾತ್ರಿ 10.30ರಿಂದ ಅಣ್ಣಪ್ಪ ದೈವ ಮತ್ತು ಪಾಷಾಣ ಮೂರ್ತಿಗೆ ನೇಮೋತ್ಸವ, ನಂತರ ಕೊರಗಜ್ಜ ಮತ್ತು ಮೈಯೊಂತಿ ದೈವದ ಕೋಲ ನಡೆಯಲಿದೆ ಎಂದು ಪುರಂದರ ಶೆಟ್ಟಿ ಗೋಳ್ತಮಜಲು ಹಾಗೂ ಡಾ. ರಾಮಕೃಷ್ಣ ಶೆಟ್ಟಿ ಗೋಳ್ತಮಜಲು ಹಾಗೂ ಶ್ರೀ ಗುರುಶಿವ ಕ್ಷೇತ್ರ ಸೇವಾ ಟ್ರಸ್ಟ್ ಪ್ರಕಟಣೆ ತಿಳಿಸಿದೆ.