ಮಂಗಳೂರಿನ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಜ.20 ರಿಂದ ಜ.25 ರವರೆಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ), ನವದೆಹಲಿ ಅವರ ಅಟಲ್ ಅಕಾಡೆಮಿ ಪ್ರಾಯೋಜಿತ 6 ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಪಾಲಿಟೆಕ್ನಿಕ್ / ಇಂಜಿನಿಯರಿಂಗ್ ಸಂಸ್ಥೆಗಳ ಉಪನ್ಯಾಸಕರು, ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.ಹೆಚ್ಚಿನ ಮಾಹಿತಿಗೆ ತರಬೇತಿಯ ಸಂಯೋಜಕ ಹರೀಶ ಸಿ.ಪಿ., (ಉಪನ್ಯಾಸಕರು) ದೂರವಾಣಿ ಸಂಖ್ಯೆ: 8904589567, ಸಹ ಸಂಯೋಜಕ, ಡಾ. ಸತೀಶ ಎನ್ ಹೆಚ್. (ಆಯ್ಕೆ ಶ್ರೇಣಿ ಉಪನ್ಯಾಸಕ) ದೂರವಾಣಿ ಸಂಖ್ಯೆ: 9844270975 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.