ಬಂಟ್ವಾಳದ ಬಸ್ತಿಪಡ್ಪು, ಬಿ.ಸಿ.ರೋಡ್ ಹಾಗೂ ಮಡಂತ್ಯಾರಿನಲ್ಲಿ ಮಳಿಗೆಗಳನ್ನು ಹೊಂದಿರುವ ಭದ್ರಾ ಹೋಂ ಅಪ್ಲೈನ್ಸಸ್ ಗೃಹೋಪಯೋಗಿ ಉತ್ಪನ್ನಗಳ ಮಾರಾಟದಲ್ಲಿ ತನ್ನ ವಿಶ್ವಾಸಾರ್ಹ ಸೇವೆಯ ಮೂಲಕ ಗಮನ ಸೆಳೆದಿದ್ದು, ದೀಪಾವಳಿಯ ಸಂದರ್ಭ ಗ್ರಾಹಕರಿಗೆ ವಿಜಯ ಕರ್ನಾಟಕ ಸಹಯೋಗದಲ್ಲಿ ನಡೆದ ವಿಕ ದೀಪೋತ್ಸವ ಅದೃಷ್ಟ ಚೀಟಿಯ ಬಹುಮಾನ ವಿತರಣೆ ಮಡಂತ್ಯಾರು ಮಳಿಗೆ ಹಾಗೂ ಬಂಟ್ವಾಳ ಮಳಿಗೆಯಲ್ಲಿ ಜ.15ರಂದು ಬುಧವಾರ ನಡೆಯಿತು.
ಭದ್ರಾ ಗ್ರಾಹಕ ಮಡಂತ್ಯಾರಿನ ಸುರೇಶ್ ಪೂಜಾರಿ ಅವರು ಭದ್ರಾ ಸಂಸ್ಥೆಯ ಮಾಲೀಕರಾದ ಮಂಜುನಾಥ ಆಚಾರ್ಯ ಮತ್ತು ಮೇಘಾ ಆಚಾರ್ಯ ಅವರಿಂದ ವಿಕ ದೀಪೋತ್ಸವದ ಟಿ.ವಿ. ಬಹುಮಾನ ಪಡೆದರು. ಗ್ರಾಹಕರಾದ ಕಿಶೋರ್, ರವಿಶಂಕರ ಶೆಟ್ಟಿ, ಸುಮಂತ್ ಶೆಟ್ಟಿ ಮತ್ತು ಮಧು ವಿವಿಧ ಬಹುಮಾನಗಳನ್ನು ಪಡೆದರು. ಈ ಸಂದರ್ಭ ಭದ್ರಾ ಸಂಸ್ಥೆ ತನ್ನ ಗ್ರಾಹಕರಿಗೆ ಕ್ರಿಸ್ಮಸ್, ಹೊಸ ವರ್ಷದ ನಿಮಿತ್ತ ನೀಡಿದ್ದ ಅದೃಷ್ಟ ಚೀಟಿಯ ಡ್ರಾ ನಡೆಯಿತು. ಮಾಲ್ಸಿ ಆಚಾರ್ಯ ಬಂಪರ್ ಬಹುಮಾನಿತರ ಆಯ್ಕೆ ಮಾಡಿದರು. ಪತ್ರಕರ್ತ ಹರೀಶ್ ಮಾಂಬಾಡಿ ಉಪಸ್ಥಿತರಿದ್ದರು.