ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ ಜಕ್ರಿಬೆಟ್ಟು ನದಿ ಕಿನಾರೆಯ ಜಾಕ್ ವೆಲ್ ನಲ್ಲಿ ತುಂಬಿರುವ ಮರಳು ಹಾಗೂ ಕೆಸರುಗಳನ್ನು ಶುಚಿಗೊಳಿಸಲಿರುವ ಹಿನ್ನೆಲೆಯಲ್ಲಿ ಜನವರಿ 16ರಿಂದ 19ರವರೆಗೆ ಪುರಸಭಾವ್ಯಾಪ್ತಿಯ ಬೃಹತ್ ನೀರು ಸರಬರಾಜಿನಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಈ ನಾಲ್ಕೂ ದಿನಗಳ ಕಾಲ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ