ಬಂಟ್ವಾಳ

ಶಂಭೂರು ಸರಕಾರಿ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

ಸರಕಾರಿ ಶಾಲೆಗಳು ಬೆಳೆಯಲು ಜಾತಿ, ಮತ, ಪಂಥ, ಪಕ್ಷ ಬೇಧ ಮರೆತು ಊರವರು, ಪಾಲಕರು ಮತ್ತು ಹಿರಿಯ ವಿದ್ಯಾರ್ಥಿಗಳು ಜೊತೆ ಜೊತೆಯಾಗಿ ಸಹಕರಿಸಿ ಒಗ್ಗಟ್ಟಿನಿಂದ ದುಡಿಯಬೇಕು. ವೈಯಕ್ತಿಕ ಮೇಲ್ಮೆಗಾಗಿ ಹಾತೊರೆಯುವಿಕೆ ಸಲ್ಲದು. ವಿದ್ಯಾರ್ಥಿಗಳನ್ನು ರಾಷ್ಟ್ರದ ಭವ್ಯ ಪ್ರಜೆಗಳನ್ನಾಗಿ ರೂಪಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನರಿಕೊಂಬು ಗ್ರಾಮ ಪಂಚಾಯತ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಹೇಳಿದರು.

ಬಂಟ್ವಾಳ ತಾಲೂಕಿನ  ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 98ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಸಂಜೀವ ಪೂಜಾರಿ, ಮಕ್ಕಳ ಸಾಧನೆಯನ್ನು ಜಗತ್ತಿಗೆ ಪರಿಚಯಿಸಲು ಎಲ್ಲರೂ ಹೊಣೆ ಹೊರಬೇಕು. ಮೌಲ್ಯಯುತ ಸಮಾಜಕ್ಕೆ ಗುಣ ಮಟ್ಟದ ಶಿಕ್ಷಣವೇ ಬುನಾದಿ ಎಂದರು.  ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಮೇಶ ಎಂ ಬಾಯಾರು ಮಾತನಾಡಿ ಅಮ್ಮನ ಮಮಕಾರ ಅಪ್ಪನ ಅಧಿಕಾರ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ. ಅತಿ ಪ್ರೀತಿ ಮತ್ತು ಅಧಿಕಾರಗಳು ಮಕ್ಕಳ ಸ್ವಾವಲಂಬನೆ ಮತ್ತುಸಾಧನಾ ಮಾರ್ಗಗಳಿಗೆ ಅಡಚಣೆಯಾಗುವುದೂ ಇದೆ. ಹೆತ್ತವರು ಮಕ್ಕಳ ಸಾಧನಾ ಬಯಕೆಗಳಿಗೆ ಬೇಡ ಎಂಬ ಮುದ್ರೆ ಒತ್ತದೆ ಉತ್ತೇಜಿಸಬೇಕು. ಮನೆಯ ಪಾಕಶಾಲೆ ಮಕ್ಕಳಲ್ಲಿ ಮೌಲ್ಯ ತುಂಬುವ ಪಾಠ ಶಾಲೆಯೂ ಆಗಬೇಕು ಎಂದರು

ಸಾಧಕರಾದ ರಮೇಶ ಎಂ ಬಾಯಾರು, ಕೆ. ಸಂಜೀವ ಪೂಜಾರಿ,ಇವರನ್ನು ಸನ್ಮಾನಿಸಲಾಯಿತು. ಹಿರಿಯ ವಿದ್ಯಾರ್ಥಿ ಹೆನ್ರಿ ಬುಕ್ಕೆಲ್ಲೊ, ಯಕ್ಷಗಾನ ನಾಟ್ಯ ಗುರು ಜಗನ್ನಾಥ್ ಸಣ್ಣಕುಕ್ಕು ಅವರನ್ನು ಗೌರವಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಹೇಮಚಂದ್ರ ಭಂಡಾರದಮನೆ, ಕಡೇಶಿವಾಲಯ ಪಿಡಿಒ ಸುನಿಲ್‌ ಕುಮಾರ್‌, ಪಿ.ಡಬ್ಲ್ಯೂ.ಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಶೈಲೇಶ್‌ ಪೂಜಾರಿ ಕುಚ್ಚಿಗುಡ್ಡೆ, ಕರ್ನಾಟಕ ಆಹಾರ ನಿಗಮ ಸದಸ್ಯ ಸುಮಂತ ರಾವ್‌, ಸಾಮಾಜಿಕ ಕಾರ್ಯ ಕರ್ತ ಆನಂದ ಎ ಶಂಭೂರು, ಪುಳಿಂಚ ಸೇವಾ ಪ್ರತಿಷ್ಠಾನದ ಶ್ರೀಧರ ಶೆಟ್ಟಿ, ಮಂಗಳೂರು ಮಹಾ ನಗರಪಾಲಿಕೆಯ ಕಾರ್ಪೋರೇಟರ್ ಸುಮಂಗಳ ರಾವ್‌ ಗುತ್ತಿಗೆದಾರರಾದ ಸುದರ್ಶನ್‌ ಬಜ, ಪ್ರಸಾದ ಭಂಡಾರದಮನೆ, ಕೃಷ್ಣಪ್ಪ ನಾಟಿ, ಹಿರಿಯರಾದ ಲಕ್ಷ್ಮಣ ಪೂಜಾರಿ ಕೆಳಗಿನಶಾಂತಿಲ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಜಯರಾಮ್ ಡಿ ಪಡ್ರೆ ಸ್ವಾಗತಿಸಿ, ಶಿಕ್ಷಕಿ ಚಿತ್ರ ಕೆ ವರದಿ ವಾಚಿಸಿ, ಶಿಕ್ಷಕ ಪವನ್ ರಾಜ್  ಸನ್ಮಾನ ಪತ್ರ ವಾಚಿಸಿ,ಶಿಕ್ಷಕಿ ಜಯಂತಿ ವಂದಿಸಿದರು. ಶಿಕ್ಷಕ ಮದುದನ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿರಾದ ಇಂದಿರಾ, ದಯಾವತಿ, ಜ್ಯೋತಿ, ಮೀನಾಕ್ಷಿ,ಮಾಲಾಶ್ರೀ, ಉಷಾ ಸಹಕರಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ