ಪ್ರಮುಖ ಸುದ್ದಿಗಳು

ಪಿಲಿಕುಳದಲ್ಲಿ ಗ್ರಹಗಳ ಪೆರೇಡ್ ವೀಕ್ಷಣೆ ನಡೆಸಿದ ಸಾರ್ವಜನಿಕರು

ಜಾಹೀರಾತು

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜ.11ರಂದು ಸಂಜೆ 6:30 ರಿಂದ ಸಾರ್ವಜನಿಕರಿಗೆ ವಿಶೇಷ ವಿದ್ಯಮಾನವಾದ ಗ್ರಹಗಳ ಪೆರೇಡ್ ವೀಕ್ಷಿಸಲು ‘ವಿಶೇಷ ಆಕಾಶ ವೀಕ್ಷಣೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವೀಕ್ಷಕರಿಗೆ ಮೊದಲಿಗೆ ನಕ್ಷತ್ರಗಳು, ನಕ್ಷತ್ರ ರಾಶಿಗಳನ್ನು ಗುರುತಿಸುವ ಬಗ್ಗೆ ಮಾಹಿತಿ ನೀಡಿ, ದೂರದರ್ಶಕಗಳ ಮೂಲಕ ಆಕಾಶದಲ್ಲಿ ಕಾಣುತ್ತಿರುವ ಗುರು ಗ್ರಹ ಮತ್ತು ಅದರ ಉಪಗ್ರಹಗಳಾದ ಅಯೋ, ಯುರೋಪಾ, ಕ್ಯಾಲಿಸ್ಟೋ ಮತ್ತು ಗ್ಯಾನಿಮೀಡ್‍ಗಳನ್ನು ವೀಕ್ಷಿಸಲು ಹಾಗೂ ಅವುಗಳ ಬಗ್ಗೆ ವಿವರಿಸಲಾಯಿತು.

ಶನಿ ಗ್ರಹ ಹಾಗೂ ಅದರ ವಿಶೇಷವಾದ ಉಂಗುರ, ಬೆಳ್ಳಿ ಚುಕ್ಕಿಯಂತಿರುವ ಶುಕ್ರ ಗ್ರಹ ಮತ್ತು ಮಂಗಳ ಗ್ರಹವನ್ನು ಸಹ ಆಸಕ್ತರು ನೋಡಿ ಸಂಭ್ರಮಿಸಿದರು. ಸ್ಪಷ್ಟವಾಗಿ ಕಾಣುತ್ತಿರುವ ಚಂದ್ರನ ಕುಳಿಗಳನ್ನು ದೂರದರ್ಶಕಗಳು ಆಕರ್ಷಕವಾಗಿ ತೋರಿಸಿ. ಈ ವಿದ್ಯಮಾನಗಳ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರ ವಿಷಯಗಳ ಸಂದೇಹಗಳನ್ನು ಕೇಂದ್ರದ ಸಿಬ್ಬಂದಿ ಬಗೆಹರಿಸಿದರು.

ವಿಜ್ಞಾನ ಕೇಂದ್ರದ ಕ್ಯುರೇಟರ್ ಜಗನ್ನಾಥ ಹಾಗೂ ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ನೇತೃತ್ವದಲ್ಲಿ ಶೈಕ್ಷಣಿಕ ಸಹಾಯಕಿ ರಶ್ಮಿ, ಮೆಂಟರ್‍ಗಳಾದ ಹೃತೀಕ್, ಆದರ್ಶ್, ಅಂಬಿಕಾ, ಸಹನಾ, ತಾಂತ್ರಿಕ ಸಿಬ್ಬಂದಿಗಳಾದ ಯತೀಶ್, ತುಕಾರಾಮ್, ವಿರುಪಾಕ್ಷಯ್ಯ, ಮಂಜುನಾಥ್, ಕಿಶೋರ್ ಕುಮಾರ್, ಗಾಯತ್ರಿ, ಶರತ್, ವಿಕ್ಟರ್ ಕಾರ್ಯಕ್ರಮದ ಆಯೋಜನೆಗೆ ಸಹಕರಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts