ಬಂಟ್ವಾಳ: ಮೂಲರಪಟ್ಣದ ಜಿಎಚ್ ಎಂ ಫೌಂಡೇಶನ್ ಅರಳ ವತಿಯಿಂದ ಆಝಾದ್ ನಗರದಲ್ಲಿ ನಿರ್ಮಿಸಲಾದ ನೂತನ ಮನೆ ಬೈತುಲ್ ಹುದಾ ಹಸ್ತಾಂತರ ಕಾರ್ಯಕ್ರಮ ಭಾನುವಾರ ಜ.12ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ಮೂಲರಪಟ್ನ ಖತೀಬರಾದ ಬಹು| ಆಲ್ ಹಾಜ್ ಶರೀಫ್ ದಾರಿಮಿ ದುಆ ಆಶೀರ್ವಚನ ನೀಡಲಿದ್ದು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸುವರು. ಈ ಸಂದರ್ಭ ಕಿರುಪುಸ್ತಕವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಬಿಡುಗಡೆ ಮಾಡುವರು. ಅಧ್ಯಕ್ಷತೆಯನ್ನು ಜಿ.ಎಚ್.ಎಂ. ಫೌಂಡೇಶನ್ ಮೂಲರಪಟ್ನ ಅಧ್ಯಕ್ಷ ಮೊಹಮ್ಮದ್ ಶಾಲಿ ವಹಿಸಲಿದ್ದು, ತರಬೇತುದಾರ ರಫೀಕ್ ಮಾಸ್ಟರ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.