Bahu Samskrithi sambhrama Invi_301224_20 copy
ಬಂಟ್ವಾಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಮತ್ತು ಚಿಣ್ಣರ ಲೋಕ ಸೇವಾ ಬಂಧು ಬಂಟ್ವಾಳ ಜಂಟಿ ಆಶ್ರಯದಲ್ಲಿ ಜನವರಿ 12ರಂದು ಸಂಜೆ ಬಹುಸಂಸ್ಕೃತಿ ಸಂಭ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಹುಭಾಷಾ ಕವಿ ಸಂಗಮ ಕಾರ್ಯಕ್ರಮ ನಡೆಯುವುದು ಎಂದು ಆಯೋಜಕ ಮೋಹನದಾಸ ಕೊಟ್ಟಾರಿ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ಸಂಜೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ವಿವಿಧ ಅಕಾಡೆಮಿಗಳ ರಿಜಿಸ್ಟ್ರಾರ್ ಗಳಾದ ಪೂರ್ಣಿಮಾ, ರಾಜೇಶ್ ಜಿ, ಚಿನ್ನಸ್ವಾಮಿ, ನಮೃತಾ ಭಾಗವಹಿಸುವರು. ಈ ವೇಳೆ ದೈವನರ್ತಕರಾದ ದೇಜಪ್ಪ ಬಾಚಕೆರೆ ಅವರನ್ನು ಸನ್ಮಾನಿಸಲಾಗುವುದು. ಬಳಿಕ ಕವಿಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಚಿಣ್ಣರಲೋಕ ಸೇವಾ ಬಂಧು ಅಧ್ಯಕ್ಷ ಮೋಹನದಾಸ ಕೊಟ್ಟಾರಿ ವಹಿಸುವರು. ವಿಜಯಾ ಬಿ.ಶೆಟ್ಟಿ ಸಾಲೆತ್ತೂರು ತುಳು ಕವಿತೆ, ಜಯಾನಂದ ಪೆರಾಜೆ ಕನ್ನಡ ಕವಿತೆ, ಸಲೋಮಿ ಡಿಸೋಜ ಮೊಗರ್ನಾಡು ಕೊಂಕಣಿ ಕವಿತೆ, ಅಶ್ರಫ್ ಅಪೊಲೊ ಬ್ಯಾರಿ ಕವಿತೆ, ಉದಯ ಭಾಸ್ಕರ ಸುಳ್ಯ ಅರೆಭಾಷೆ, ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ ಕೊಡವ, ಸಂದೀಪ್ ಕೋಡಿಕ್ಕಲ್ ಕೊರಗಕವಿತೆ ವಾಚನ ಮಾಡಲಿದ್ದು, ರಂಗಭೂಮಿ ಕಲಾವಿದ ಎಚ್ಕೆ ನಯನಾಡು ಕವಿಗೋಷ್ಠಿ ನಿರ್ವಹಿಸುವರು. ಇದೇ ವೇಳೆ ಯಕ್ಷನಾಟ್ಯ ವೈಭವ, ಕಂಗೀಲು ನೃತ್ಯ, ಕೊಡವ ಉಮ್ಮತ್ತಾಟ್ ನೃತ್ಯ, ಕೊಂಕಣಿ ನೃತ್ಯ, ದಫ್ ನೃತ್ಯ, ಅರೆಭಾಷೆ ನೃತ್ಯವೈಭವ ಇರಲಿದೆ ಎಂದು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ಚಿಣ್ಣರಲೋಕ ಸೇವಾ ಬಂಧು ಪ್ರಕಟಣೆ ತಿಳಿಸಿದೆ.