ED ಅಧಿಕಾರಿಗಳು ನಾವು ಎಂದು ನಂಬಿಸಿ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪ ನಾರ್ಶ ಎಂಬಲ್ಲಿರುವ ಉದ್ಯಮಿಯೊಬ್ಬರ ಮನೆಗೆ ಅಪರಿಚಿತರು ಆಗಮಿಸಿ ಲಕ್ಷಾಂತರ ರೂ ಲೂಟಿ ಮಾಡಿ ತೆರಳಿದ್ದಾಗಿ ದೂರಲಾಗಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸುಲೈಮಾನ್ ಎಂಬವರ ಮನೆಗೆ ತಮಿಳುನಾಡು ಮೂಲದ ಕಾರ್ ನಲ್ಲಿ ಆಗಮಿಸಿದ ತಂಡ ಬಂದಿದೆ. ಬಳಿಕ ನಾವು ಇಡಿ ಅಧಿಕಾರಿಗಳು ‘ ಎಂದು ನಂಬಿಸಿ ಸುಮಾರು ಎರಡು ಗಂಟೆಗಳ ವರೆಗೆ ತನಿಖೆ ನಡೆಸಿದೆ. ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿಗಳನ್ನು ಕೊಂಡುಹೋಗಿದೆ. ಪರಾರಿಯಾದ ಬಳಿಕವಷ್ಟೇ ಇದು ನಕಲಿ ದಾಳಿ ಎಂದು ಮನೆಯವರಿಗೆ ಗೊತ್ತಾಗಿದೆ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.