ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಚುನಾವಣಾಧಿಕಾರಿಯಾಗಿದ್ದು, 2025-26ರಿಂದ 2029-30ನೇ ಸಾಲಿನ 5 ವರ್ಷಗಳ ಅವಧಿಗೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನಿಬಂಧನೆ ಅನ್ವಯ ಚುನಾವಣೆ ನಿಗದಿಪಡಿಸಿದ್ದರು. ಒಂದೇ ಉಮೇದುವಾರಿಕೆ ಬಂದ ಕಾರಣ, ಅಧ್ಯಕ್ಷರಾಗಿ ಪದ್ಮರಾಜ ಬಲ್ಲಾಳ ಮಾವಂತೂರು, ಉಪಾಧ್ಯಕ್ಷರಾಗಿ ಉಮ್ಮರ್ ಬಿ, ಪ್ರಧಾನ ಕಾರ್ಯದರ್ಶಿಯಾಗಿ ರಮಾನಾಥ ವಿಟ್ಲ, ಖಜಾಂಚಿಯಾಗಿ ಆಲ್ಬರ್ಟ್ ಮಿನೇಜಸ್, ಜಿಲ್ಲಾ ಪ್ರತಿನಿಧಿಯಾಗಿ ಪದ್ಮನಾಭ ರೈ ಗೋಳ್ತಮಜಲು ಆಯ್ಕೆಗೊಂಡರು ಎಂದು ಪ್ರಕಟಣೆ ತಿಳಿಸಿದೆ.