ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಸಂಯೋಜಿತ ರಿಕ್ಷಾ ಚಾಲಕ ಮಾಲೀಕರ ಸಂಘ ಹಾಗೂ ಲಯನ್ಸ್ ಆಶ್ರಯದಲ್ಲಿ ಒಪ್ಟಿಕ್ ವರ್ಲ್ಡ್ ಕಣ್ಣಿನ ಕ್ಲಿನಿಕ್ ಮತ್ತು ಒಪಿಕಲ್ಸ್ ಸಹಕಾರದೊಂದಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಬಿಎಂಎಸ್ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಬಿಎಂಎಸ್ ಗೌರವಾಧ್ಯಕ್ಷ ವಸಂತಕುಮಾರ್ ಮಣಿಹಳ್ಳ, ಬಿ ಎಂ ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾರಾಯಣ ಪೂಜಾರಿ, ಬಂಟ್ವಾಳ ಆಟೊ ಚಾಲಕ ಮಾಲೀಕರ ಸಂಘ ಅಧ್ಯಕ್ಷ ವಿಶ್ವನಾಥ ಚಂಡ್ತಿಮಾರ್, ಓಪ್ಟಿಕ್ ವರ್ಲ್ಡ್ ನ ವೈದ್ಯರಾದ ಡಾ. ಮರಿಟಾ ಹಾಗೂ ಡಾ. ಸಿಜೋ ಉಪಸ್ಥಿತರಿದ್ದರು. ಈ ಸಂದರ್ಭ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಬಿಎಂಎಸ್ ಸದಸ್ಯರಾದ ನಾರಾಯಣ ಪೂಜಾರಿ. ಚೇತನ್ ಪಂಚಮಿ. ಕೃಷ್ಣಪ್ಪ ನಾಟಿ. ಕೇಶವ ಇವತ್ತೂರು. ಅವರಿಗೆ ಬಂಟ್ವಾಳ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು. ವಸಂತ್ ಕುಮಾರ್ ಮಣಿಹಳ್ಳ ನಿರ್ವಹಿಸಿ ಸ್ವಾಗತಿಸಿದರು. ಶ್ರೀಕಾಂತ್ ಪಾಣೀರ್ ಧನ್ಯವಾದ ಮಾಡಿದರು