filter: 0; fileterIntensity: 0.0; filterMask: 0; module: a; hw-remosaic: 0; touch: (0.28958333, 0.28958333); modeInfo: ; sceneMode: NightHDR; cct_value: 0; AI_Scene: (13, -1); aec_lux: 193.17651; hist255: 0.0; hist252~255: 0.0; hist0~15: 0.0;
ಬದನಾಜೆ ಶಂಕರ ಭಟ್
ಬಂಟ್ವಾಳ: ಬಂಟ್ವಾಳ ಕೈಕಂಬ ಜೋಡುಮಾರ್ಗ ಸರಿದಂತರ ಪ್ರಕಾಶನದ ವತಿಯಿಂದ ಭಾನುವಾರ ಕೈಕಂಬ ಶಮ್ಯಾಪ್ರಾಸದಲ್ಲಿ ನಡೆದ ಸಮಾರಂಭದಲ್ಲಿ ಕೃಷಿ ಪಂಡಿತ, ಸಂಶೋಧಕ ಬದನಾಜೆ ಶಂಕರ ಭಟ್ ಹಾಗೂ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಸರಿದಂತರ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.
ಈಶ್ವರ ಮಲ್ಪೆ
ಮಂಗಳೂರು ರಾಮಕೃಷ್ಣ ಮಿಷನ್-ಸ್ವಚ್ಛ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಅವರು ಮಾನವ ಸಂಬಂಧಗಳ ಕುರಿತು ಮಾತನಾಡಿದರು. ವೈದ್ಯ ಡಾ. ಎಂ.ಎಸ್.ಭಟ್ ಉಪಸ್ಥಿತರಿದ್ದರು. ಪ್ರಕಾಶನದ ಸಂಚಾಲಕ ರಾಜಮಣಿ ರಾಮಕುಂಜ ಪ್ರಸ್ತಾವನೆಗೈದರು. ಈಶ್ವರ ಮಲ್ಪೆ ಹಾಗೂ ಬದನಾಜೆ ಶಂಕರ ಭಟ್ ಅವರು ತಮ್ಮ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ ಎಂದರು. ಭಾರತಿ ರಾಮಕುಂಜ ಹಾಗೂ ಮೇಧಾ ರಾಮಕುಂಜ ಅವರು ಸಮ್ಮಾನ ಪತ್ರ ವಾಚಿಸಿದರು. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರ್ವಹಿಸಿದರು.