ತಾಲೂಕು ಆಡಳಿತ ಸೌಧದಲ್ಲಿರುವ ಆಹಾರ ಶಾಖೆಯಲ್ಲಿ ರೇಷನ್ ಕಾರ್ಡ್ ವಿತರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ತಾಲೂಕು ಆಡಳಿತ ಸೌಧದ ಮುಂಭಾಗ ಜನಸಂದಣಿ ಕಂಡುಬಂತು.
ಬೆಳಗ್ಗೆ ಸುಮಾರು 10 ಗಂಟೆಯ ವೇಳೆ ತಾಲೂಕು ಕಚೇರಿಯ ಮೆಟ್ಟಿಲಿನವರೆಗೂ ಕ್ಯೂ ಮುಂದುವರೆಯಿತು. ಮಹಿಳೆಯರು, ವೃದ್ಧರು, ಯುವಕರೆನ್ನದೆ ಎಲ್ಲರು ಸಾಲುಗಟ್ಟಿ ನಿಂತಿದ್ದರು. ರೇಷನ್ ಕಾರ್ಡ್ ತಿದ್ದುಪಡಿ, ಸೇರ್ಪಡೆ, ವಾಸ್ತವ್ಯ ಬದಲಾವಣೆ ಕುರಿತು ನೀಡಿದ ಅರ್ಜಿ ಪರಿಶೀಲಿಸಿದ ಬಳಿಕ ಇಂದು ಕಾರ್ಡ್ ವಿತರಣೆಯಾಗುತ್ತದೆ ಎಂದು ನಾವು ಬಂದಿದ್ದೇವೆ ಎಂದು ಸಾಲಿನಲ್ಲಿ ನಿಂತವರು ತಿಳಿಸಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)