ನಮ್ಮ ಹಿರಿಯರು ಭಗವದ್ಗೀತೆಯನ್ನು ನೇರವಾಗಿ ಅಧ್ಯಯನ ಮಾಡದೇ ಇದ್ದರೂ ಅದರ ಶಾಸ್ತ್ರವನ್ನು ಅರಿಯುವ ಕಾರ್ಯ ಮಾಡಿದ್ದರು. ಸಮಾಜದ ಒಳಿತ್ತನ್ನು ಬಯಸಿ ಸಾಮಾಜಿಕ, ಶೈಕ್ಷಣಿಕ ಕಾರ್ಯವನ್ನು ಮಾಡುತ್ತಾ ಬಂದಿರುವ ಶ್ರೀಕೃಷ್ಣ ಮಂದಿರವು ಸಂಘದ ಚಿಂತನೆಯ ಮೂಲಕ ಧರ್ಮ ಬಿತ್ತರಿಸುತ್ತಿದೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ಅಮ್ಟೂರು ಶ್ರೀಕೃಷ್ಣ ಮಂದಿರದ ೨೫ನೇ ವಾರ್ಷಿಕ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಆರ್‌ಎಸ್‌ಎಸ್ ಪ್ರೇರಣೆಯಿಂದ ಹುಟ್ಟಿಕೊಂಡ ಶ್ರೀಕೃಷ್ಣ ಮಂದಿರವು ಹಿಂದೂ ಸಮಾಜಕ್ಕೆ ಆಪತ್ತು ಬಂದಾಗ ಎದುರಿಸುವ ಕಾರ್ಯ ಮಾಡಿದೆ. ಹಿಂದೂ ಸಮಾಜ ಸುಸಂಘಟಿತ ಸಮಾಜ ಆಗಬೇಕು ಎನ್ನುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಂಬಯಿ ಹೇರಂಭ ಇಂಡಸ್ಟ್ರೀಸ್‌ನ ಅಧ್ಯಕ್ಷ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ವಾಗ್ಮಿ ಹಾರಿಕಾ ಮಂಜುನಾಥ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಜೀವರಕ್ಷಕ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.
ದ.ಕ.ಜಿಲ್ಲಾ ಕೊಟ್ಟಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಉದ್ಯಮಿ ಸತೀಶ್ ಆಳ್ವ ಇರಾ ಬಾಳಿಕೆ, ಅಭಿಮತ ಚಾನೆಲ್ ಮುಖ್ಯಸ್ಥೆ ಡಾ| ಮಮತಾ ಪಿ.ಶೆಟ್ಟಿ, ಚಲನಚಿತ್ರ ನಿರ್ಮಾಪಕ ರವಿರಾಜ್ ಸಾಲೆತ್ತೂರು, ಉದ್ಯಮಿಗಳಾದ ಆನಂದ ಆಳ್ವ ಗೋಳ್ತಮಜಲುಗುತ್ತು, ಡಾ| ಸ್ವಾಮಿ, ನಿವೃತ್ತ ಸೈನಿಕ ಸೋಮಪ್ಪ ಪೂಜಾರಿ, ಮಂದಿರದ ಗೌರವಾಧ್ಯಕ್ಷ ಶಂಕರನಾರಾಯಣ ಐತಾಳ್, ಅಧ್ಯಕ್ಷ ರಮೇಶ್ ಕರಿಂಗಾಣ, ಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಪ್ರಭು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮ್ಟೂರು ಸ್ವಾಗತಿಸಿದರು. ಮಂದಿರದ ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು ಪ್ರಸ್ತಾವನೆಗೈದರು. ರಾಜೇಶ್ ಕೊಟ್ಟಾರಿ ಹಾಗೂ ಸಂತೋಷ್ ಬೇಂಕ್ಯ ಕಾರ್ಯಕ್ರಮ ನಿರ್ವಹಿಸಿದರು.
| ಸಾಹಿತ್ಯದಿಂದ ಸಾಮರಸ್ಯ ಆಶಯ | ಎರಡು ದಿನ ವಿಚಾರ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ (more…)