ಹಿಂದೂ ಯುವ ಸೇನೆ ಏಕಲವ್ಯ ಶಾಖೆ ಮಣಿಹಳ್ಳ ಮತ್ತು. ಎಳ್ಳುಗಂಟು ದೀಪೋತ್ಸವ ಸಮಿತಿ ಪಣೆಕಲಪಡ್ಪು ಸಹಭಾಗಿತ್ವದಲ್ಲಿ 13ನೇ ವರ್ಷದ ಸಾಮೂಹಿಕ ಶನಿಪೂಜೆ. ಸಹಸ್ರ ಎಳ್ಳುಗಂಟು ದೀಪೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಅದೃಷ್ಟ ಚೀಟಿಯನ್ನು. ಪಣೆಕಲ ಶ್ರೀ ಮಹಮಾಯಿ ದುರ್ಗಾಂಬ ಕ್ಷೇತ್ರದಲ್ಲಿ ಪ್ರಧಾನ ಆರ್ಚಕ ವಸಂತ ತಂತ್ರಿ ಪಣೆಕಲ ಬಿಡುಗಡೆಗೊಳಿಸಿದರು.
ಈ ಸಂದರ್ಭ ಹಿಂದು ಯುವಸೇನೆ ತಾಲೂಕು ಅಧ್ಯಕ್ಷ ವಸಂತಕುಮಾರ್ ಮಣಿಹಳ್ಳ, ಏಕಲವ್ಯ ಶಾಖೆ ಅಧ್ಯಕ್ಷ ನವೀನ್ ಕುಲಾಲ್ ಮಣಿಹಳ್ಳ, ಮಹಮ್ಮಾಯ ದುರ್ಗಾಂಬಾ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಸುಜಾತ ಜಯ ಸಪಲ್ಯ, ಪ್ರಮುಖರಾದ ಜನಾರ್ದನ ಪೈ. ತಾರನಾಥ ಗೌಡ, ಶಂಕರ ಪೂಜಾರಿ,.ಉಮೇಶ್ ಕುಲಾಲ್,.ಜಗದೀಶ್, ಕೃಷ್ಣ ಜಿ ಗೌಡ. ಲೋಕನಾಥ ಕುಲಾಲ್. ರಾಜೇಶ್ ಗೌಡ. ರತ್ನಾಕರ. ಹರಿನಾಥ. ರಾಜೇಶ್ ದಾಸ್. ವೀರಪ್ಪ ಮಣ್ಣಪು ಉಪಸ್ಥಿತರಿದ್ದರು.