ಕರ್ನಾಟಕ ಕರಾವಳಿ ಎನಿಸಿಕೊಂಡಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡವಲ್ಲದೆ,ಕಾಸರಗೋಡು ಜಿಲ್ಲೆಗಳಲ್ಲಿಯೂ ಜಾತ್ರೆ ಎಂದರೆ ಇಡೀ ಊರವರಷ್ಟೇ ಅಲ್ಲ, ಹೊರಭಾಗಗಳಲ್ಲಿ ನೆಲೆಸಿದವರೂ ಒಮ್ಮೆ ಬಂದು ಹೋಗುವ ಪದ್ಧತಿ ಇದೆ. ಜನವರಿ ತಿಂಗಳು ಬಂತೆಂದರೆ, ಜಾತ್ರೋತ್ಸವಗಳು ಆರಂಭ. ಮೇ ತಿಂಗಳವರೆಗೂ ಹಬ್ಬದೋಪಾದಿಯಲ್ಲಿ ಉತ್ಸವ ನಡೆಯುತ್ತದೆ. ಹಿಂದು, ಮುಸ್ಲಿಂ, ಜೈನ ಧರ್ಮೀಯರ ಆರಾಧನಾ ಕೇಂದ್ರಗಳಲ್ಲೂ ಉತ್ಸವಗಳು ಪ್ರಸಿದ್ಧ. ಈ ವರ್ಷ ಬೇಸಗೆಯಲ್ಲಿ ಯಾವ ದಿನ ಯಾವ ಜಾತ್ರೆ? ಇಲ್ಲಿದೆ ವಿವರ. (ವಿ.ಸೂ: ನಿಮ್ಮೂರಿನ ಜಾತ್ರೆ ಕುರಿತು ಮಾಹಿತಿಯನ್ನು 9740310233ಗೆ ವಾಟ್ಸಾಪ್ ಸಂದೇಶ ಕಳುಹಿಸಬಹುದು)
ಜನವರಿ ತಿಂಗಳು:
ಜನವರಿ ತಿಂಗಳಲ್ಲಿ ಗಡಿನಾಡು ಕರೋಪಾಡಿ ಗ್ರಾಮದ ವಗೆನಾಡು ಸುಬ್ರಾಯ ದೇವರ ಉತ್ಸವ 5ರಂದು ನಡೆಯಲಿದೆ. ಅಂದೇ ಕೋಲ್ಪೆ ಸುಬ್ರಹ್ಮಣ್ಯ ಉತ್ಸವ ನಡೆಯುವುದು. ಜನವರಿ 9ರಂದು ಬಂಗಾಡಿ ಬಸದಿ ರಥ, ಕೋಟ ಅಮೃತೇಶ್ವರಿ ಜಾತ್ರೆ ನಡೆಯಲಿದೆ. 11ರಂದು ಪದ್ಯಾಣ ಮಹಾಲಿಂಗೇಶ್ವರ ಉತ್ಸವ. 14ರಂದು ಮಹಾಸಂಕ್ರಮಣ. ಅಂದೇ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧ್ವಜಾರೋಹಣ ನಡೆಯಲಿದೆ. ಉಡುಪಿ ಮೂರುರಥ, ಸಂಗಬೆಟ್ಟು ಬನಶಂಕರೀ ಉತ್ಸವ, ಕಾವೂರು ಧ್ವಜ, ಮಂಜನಾಡಿ ಧ್ವಜ, ಕುಂದಾಪುರ ಅರಸಮ್ಮಕಾನು ಶೇಡಿಮನೆ ದುರ್ಗಾಪರಮೇಶ್ವರಿ ಕೆಂಡೋತ್ಸವ, ಕೂಡ್ಲು ಮಹಾವಿಷ್ಣು ಜಾತ್ರೆ ನಡೆಯಲಿದೆ. 15ರಂದು ಉಡುಪಿ ಚೂರ್ಣೋತ್ಸವ, 16ರಂದು ಸಾಲಿಗ್ರಾಮ ರಥೋತ್ಸವ ನಡೆಯಲಿದೆ. 17ರಂದು ಕುಂಬಳೆ ಮಹೋತ್ಸವ, ಕಾವೂರು ಮಹಾಲಿಂಗೇಶ್ವರ ಜಾತ್ರೆ, 19ರಂದು ಕಾರ್ಮಾರು ಮಹಾವಿಷ್ಣು ಮಹೋತ್ಸವ, ನಾವೂರ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನ ಜಾತ್ರೆ, 21ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ರಥ, ಉಜಿರೆ ಜನಾರ್ದನ ರಥ, ಕದ್ರಿ ರಥೋತ್ಸವ ನಡೆಯಲಿದೆ. 26ರಂದು ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರ ರಥ, 27ರಂದು ನಾಳ ದುರ್ಗಾಪರಮೇಶ್ವರಿ ರಥ, 29ರಂದು ನಾರಂಪಾಡಿ ಉಮಾಮಹೇಶ್ವರ ಧ್ವಜ, 30ರಂದು ಬಲ್ನಾಡು ಬಟ್ಟೆ ವಿನಾಯಕ ಉತ್ಸವ, 31ರಂದು ಮುಸ್ಲಿಮರ ಶಾಬಾನ್ ತಿಂಗಳಾರಂಭ.
ಫೆಬ್ರವರಿ ತಿಂಗಳು:
1ರಂದು ನಾರಂಪಾಡಿ ಉಮಾಮಹೇಶ್ವರ ಉತ್ಸವ, 2ರಂದು ಸೌತಡ್ಕ ಮಹಾಗಣಪತಿ ಮೂಡಪ್ಪ ಸೇವೆ, ಬಸ್ರೂರು ಮಹಾಲಸಾ ನಾರಾಯಣಿ ರಥ, 3ರಂದು ಸುರತ್ಕಲ್ ವೀರಭದ್ರ ದುರ್ಗಾಪರಮೇಶ್ವರಿ ಚೂರ್ಣೋತ್ಸವ, 4ರಂದು ಕಶೆಕೋಡಿ ಲಕ್ಷ್ಮೀವೆಂಕಟೇಶ್ವರ ಉತ್ಸವ, ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಇಡಗುಂಜಿ ಶ್ರೀ ವಿನಾಯಕ ರಥೋತ್ಸವ. ರಥಸಪ್ತಮಿಯ ಆ ದಿನ ಮಂಗಳೂರು ವೆಂಕಟರಮಣ ದೇವರ ರಥೋತ್ಸವ ನಡೆಯಲಿದೆ. ಪೋಳ್ಯ ಲಕ್ಷ್ಮೀವೆಂಕಟರಮಣ ದೇವರ ರಥೋತ್ಸವವೂ ಅಂದೇ ನಡೆಯುವುದು. ಫೆಬ್ರವರಿ 6ರಂದು ಉಪ್ಪಿನಂಗಡಿ ಲಕ್ಷ್ಮೀವೆಂಕಟರಮಣ ರಥ, ಪಂಜ ಪಂಚಲಿಂಗೇಶ್ವರ ರಥ, ಮೊಗರ್ನಾಡು ರಥೋತ್ಸವ ಇರಲಿದೆ. ಫೆಬ್ರವರಿ 7ರಂದು ಒಡಿಯೂರು ರಥೋತ್ಸವ ವಿಜೃಂಭಣೆಯಿಂದ ನಡೆಯುವುದು. ಅಂದು ಕುಂಬಳೆ ಬಂಬ್ರಾಣದ ಧೂಮಾವತಿ ನೇಮೋತ್ಸವ ನಡೆಯಲಿದೆ.ಕಾನಂಗಿ ಗಾಯತ್ರಿ ದೇವಿ ಪ್ರತಿಷ್ಠಾವರ್ಧಂತಿ, ಆಗಲ್ಪಾಡಿ ದುರ್ಗಾಪರಮೇಶ್ವರಿ ಅವಭೃತ. 9ರಂದು ಶ್ರೀ ವಾದಿರಾಜ ಜಯಂತಿ, ತೊಡಿಕ್ಕಾನ ಮಲ್ಲಿಕಾರ್ಜುನ ಪ್ರತಿಷ್ಠಾವರ್ಧಂತಿ, 10ರಂದು ಮೂಡುಬಿದಿರೆ ಬಡಗುಬಸದಿ ರಥ, 11ರಂದು ಕಲ್ಲೇಗ ಕಲ್ಕುಡ ಜಾತ್ರೆ, ಚಿಪ್ಪಾಡು ಜಾತ್ರೆ, 12ರಂದು ರಾಮಕುಂಜ ರಥ, 13ರಂದು ಕೆಲಿಂಜ ಉಳ್ಳಾಲ್ತಿ ಜಾತ್ರೆ, 14ರಂದು ಕೊಡವೂರು ಶಂಕರನಾರಾಯಣ ರಥ, 15ರಂದು ನಂದಾವರ ರಥೋತ್ಸವ, 16ರಂದು ಮುಚ್ಚಂಪಾಡಿ ಧೂಮಾವತಿ ಭಂಡ ನೇಮ, 18ರಂದು ಮುಜಂಗಾವು ಪಾರ್ಥಸಾರಥಿ ಉತ್ಸವ, ಕಾಪು ಜನಾರ್ದನ ಉತ್ಸವ, 20ರಂದು ಉಪ್ಪಿನಂಗಡಿ ಮಖೆ ಜಾತ್ರೆ, 22ರಂದು ಪೆರುವಾಯಿ ಜಾತ್ರೆ, 26ರಂದು ದೇಲಂಪಾಡಿ ಉತ್ಸವ, 28ರಂದು ಕಾರಿಂಜ ರಥ, ಗೋಕರ್ಣ ಮಹಾಬಲೇಶ್ವರ ರಥ.
ಮಾರ್ಚ್ ತಿಂಗಳು:
1ರಂದು ಉಚ್ಚಿಲ ಶ್ರೀ ಮಹಾಲಿಂಗೇಶ್ವರ ರಥ, 2ರಂದು ಪವಿತ್ರ ರಮ್ಝಾನ್ ತಿಂಗಳಾರಂಭ, 3ರಂದು ಕೇಳ್ದೋಡಿ ಬ್ರಹ್ಮಬೈದರ್ಕಳ ಜಾತ್ರೆ, 6ರಂದು ಬಂಟ್ವಾಳ ವೆಂಕಟರಮಣ ರಥ, 8ರಂದು ಬರಿಮಾರು ಮಹಮ್ಮಾಯಿ ರಥ, 13ರಂದು ಮೂಡಿಗೆರೆ ಫಲ್ಗುಣಿ ಕಲಾನಾಥೇಶ್ವರ ಬ್ರಹ್ಮರಥಾರೋಹಣ, ಹೋಳಿಹುಣ್ಣಿಮೆ ಕಾಮದಹನ, ಬಾಯಾರು ಪಂಚಲಿಂಗೇಶ್ವರ ಉತ್ಸವ, ಉಪ್ಪಿನಂಗಡಿ ಮಖೆ ಜಾತ್ರೆ, 14ರಂದು ಕುತ್ಯಾಳ ಗೋಪಾಲಕೃಷ್ಣ ರಥ, ಕಾರ್ಕಳ ಹಿರೇಬಸದಿ ರಥ. 15ರಂದು ಕಾಸರಗೋಡು ಕಾಳ್ಳಂಗಾಡು ಮೂಕಾಂಬಿಕಾ ಉತ್ಸವ, ಮೂಡಿಗೆರೆ ಫಾಲ್ಗುಣಿ ಕಲಾನಾಥೇಶ್ವರ ರಥ, 16ರಂದು ಪೆರ್ಡೂರು ರಥ, 17ರಂದು ವಾದಿರಾಜ ಪುಣ್ಯತಿಥಿ, ಉಳ್ಳಾಲ ಲಕ್ಷ್ಮೀನರಸಿಂಹ ಬ್ರಹ್ಮರಥ, 18ರಂದು ಅಡೂರು ಅವಭೃತ, ಅನಾರು ಪಟ್ರಮೆ ದುರ್ಗಾಪರಮೇಶ್ವರಿ ಜಾತ್ರಾರಂಭ, 20ರಂದು ಕರಾಯ ಮಹಾಲಿಂಗೇಶ್ವರ ಉತ್ಸವ, 22ರಂದು ಆಲಂಕಾರು ದುರ್ಗಾಪರಮೇಶ್ವರಿ ರಥ, ಕೊಲ್ಲೂರು ಜಾತ್ರೆ, 30ರಂದು ಮಂಗಳೂರು ಕಾಳಿಕಾಂಬಾ ಉತ್ಸವ.
ಏಪ್ರಿಲ್ ತಿಂಗಳು:
4ರಂದು ಬಾರ್ಕೂರು ರಥ, ಬ್ರಹ್ಮಾವರ ರಥ, ಮಂಗಳೂರು ಡೊಂಗರಕೇರಿ ರಥ, 5ರಂದು ಶರವು ರಥ, 6ರಂದು ಕಣಿವೆ ಶ್ರೀರಾಮ ರಥ, 10ರಂದು ಪೊಳಲಿ ಜಾತ್ರೆ, 13ರಂದು ಮಧೂರು ಧ್ವಜ, ಬಂಟ್ವಾಳ ಮಹಾಲಿಂಗೇಶ್ವರ ರಥ, 15ರಂದು ಮಲ್ಪೆ ವಡಭಾಂಡೇಶ್ವರ ರಥ, 16ರಂದು ಮಧೂರು ಮಹೋತ್ಸವ, ಾಅಮ್ಮೆಂಬಳ ಸೋಮನಾಥೇಶ್ವರ ರಥ, ಬಂಟ್ವಾಳ ಮಹಾಲಿಂಗೇಶ್ವರ ರಥ, 17ರಂದು ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮರಥ, ನೀಲಾವರ ಮಹಿಷಮರ್ದಿನಿ ಮಹಾರಥ, ಪಾವಂಜೆ ರಥ, 18ರಂದು ಅನಂತಪುರ ಕುಂಬಳೆ ಮಹೋತ್ಸವ, ಎಲ್ಲೂರು ರಥ, 19ರಂದು ಕಡೇಶಿವಾಲಯ ರಥ, 20ರಂದು ಕಟೀಲು ದುರ್ಗಾಪರಮೇಶ್ವರಿ ರಥೋತ್ಸವ, 21ರಂದು ಮುಜುಂಗಾವು ವಾರ್ಷಿಕೋತ್ಸವ, 23ರಂದು ಉಳ್ಳಾಲ ಮಲರಾಯ ಧ್ವಜ, 29ರಂದು ಬಾಯಾರು ಮಲರಾಯ ಕಡೇಬಂಡಿ,
ಮೇ ತಿಂಗಳು
2ರಂದು ಕಾರ್ಕಳ ವೆಂಕಟರಮಣ ರಥ, 5ರಂದು ಮಿತ್ತನಡ್ಕ ಕಡೇಬಂಡಿ, 6ರಂದು ಕೊಕ್ಕಡ ರಥ, 8ರಂದು ಮಾನ್ಯ ವೆಂಕಟರಮಣ ರಥ, 17ರಂದು ಉತ್ತರ ಕನ್ನಡದ ಸಿದ್ಧಾಪುರದಲ್ಲಿ ರಥೋತ್ಸವ, ಮಂಜನಾಡಿ ರಥೋತ್ಸವ.
View Comments
ಇದು ತುಂಬಾ ಉಪಯುಕ್ತ ಮಾಹಿತಿ. ಧನ್ಯವಾದಗಳು ಬಂಟ್ವಾಳ ನ್ಯೂಸ್ ಚಾನೆಲ್ ಗೆ 💐🙏🏼