ಪುತ್ತೂರು ಹೊರವಲಯದ ಪರ್ಲಡ್ಕ ಎಂಬಲ್ಲಿ ಕಾರೊಂದು ಕಂದಕಕ್ಕೆ ಉರುಳಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. ಸುಳ್ಯ ಜಟ್ಟಿಪಳ್ಳದ ಚಿದಾನಂದ, ರಮೇಶ್ ಹಾಗೂ ಅಣ್ಣು ನಾಯ್ಕ ಮೃತಪಟ್ಟವರು ಎಂದು ತಿಳಿದುಬಂದಿದೆ. ಮಾಣಿ ಮೈಸೂರು ಹೆದ್ದಾರಿಯ ಬೈಪಾಸು ರಸ್ತೆಯಲ್ಲಿರುವ ಪರ್ಲಡ್ಕ ಬಳಿ ಸುಳ್ಯದ ಆಲ್ಟೊ ಕಾರು ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಉರುಳಿಬಿದ್ದಿದೆ.