ಬಂಟ್ವಾಳ: ದೊಡ್ಡಬಳ್ಳಾಪುರದಲ್ಲಿ ಜ.೬ರಿಂದ ನಡೆಯಲಿರುವ ಪುರುಷರ ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ಕಬಡ್ಡಿ ಪಂದ್ಯಾಟಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಂಸ್ಥೆಯು ಸೀನಿಯರ್ ಜಿಲ್ಲಾ ತಂಡವನ್ನು ಆಯ್ಕೆಗೊಳಿಸಲಿದ್ದು, ಉಜಿರೆ ಎಸ್.ಡಿ.ಎಂ.ಕಾಲೇಜು ಇಂಡೋರ್ ಸ್ಟೇಡಿಯಂನಲ್ಲಿ ಡಿ.೨೮ ರಂದು ಸಂಜೆ ೩ ಗಂಟೆಗೆ ಆಯ್ಕೆ ನಡೆಯಲಿದೆ. ಭಾಗವಹಿಸುವ ಕಬಡ್ಡಿ ಕ್ರೀಡಾಪಟು ದೇಹದ ತೂಕ ೮೫ ಕೆ.ಜಿ. ಒಳಪಟ್ಟವರಾಗಿರಬೇಕು ಎಂದು ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ ಕರ್ಣ ತಿಳಿಸಿದ್ದಾರೆ.
KABADDI
DODDABALLAPURA
BANTWALA