ಕಲ್ಲಡ್ಕ

ಪೆರಾಜೆ ಗುತ್ತು ಚಾವಡಿಯ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ

ಬಂಟ್ವಾಳ: ಪೆರಾಜೆ ಗ್ರಾಮದ ಅರಸುದೈವ ಗುಡ್ಡ ಚಾಮುಂಡಿ, ಪ್ರಧಾನಿ ಪಂಜುರ್ಲಿ, ಬಂಟೆದಿ ಮಲೆ ಕೊರತಿ ದೈವಗಳ ಪೆರಾಜೆ ಗುತ್ತು ಚಾವಡಿಯ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ಇತ್ತಿಚೆಗೆ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಜಾಹೀರಾತು


ಈ ಶುಭ ಸಂದರ್ಭದಲ್ಲಿ ಪೆರಾಜೆಗುತ್ತು ಶ್ರೀಕಾಂತ ಆಳ್ವ,ಜಯರಾಮ್ ರೈ,ಡಾ.ಶ್ರೀನಾಥ್ ಆಳ್ವ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕುಶಲ ಎಂ.ಪೆರಾಜೆ,ಕಾರ್ಯಾಧ್ಯಕ್ಷರಾದ ಜನಾರ್ಧನ ಪಾಳ್ಯ, ಕೋಶಾಧಿಕಾರಿ ಕೃಷ್ಣಗೌಡ, ಗೌರವಾದ್ಯಕ್ಷರಾದ ಸಚ್ಚಿದಾನಂದ ರೈ,ಶಾಂತಪ್ಪ ಕುಲಾಲ್, ಉಪಾಧ್ಯಕ್ಷರಾದ ಹರೀಶ್ ರೈ,ರವೀಂದ್ರ ರೈ,ಶ್ರೀನಿವಾಸ್ ಪೂಜಾರಿ,ಕಾರ್ಯದರ್ಶಿಗಳಾದ ಸಂಜೀವ ಸಾದಿಕುಕ್ಕು ಮತ್ತು ಪದಾಧಿಕಾರಿಗಳಾದ ರಾಜಾರಾಮ್ ಭಟ್,ಬಾಬು ಪೂಜಾರಿ,ರಾಮಣ್ಣ ಕುಡೋಳು,ಜನಾರ್ದನ ಗೌಡ,ಲಕ್ಷ್ಮೀಶ, ಚಂದಪ್ಪ ನಾಯ್ಕ,ಸುಂದರ ಬಂಗೇರ,ಮೋನಪ್ಪ ಸಾಲ್ಯಾನ್, ಸುಂದರ ಗೌಡ,ಉಮೇಶ್, ತಿಮ್ಮಪ್ಪ ಗೌಡ,ನಾರಾಯಣ ನಾಯ್ಕ್,ಶರತ್ ಪೆರಾಜೆ,ಬಾಲಕೃಷ್ಣ ಕುಡೋಳು, ಕುಶಾಲಪ್ಪ ಅಲುಂಬುಡ,ತೇಜ ಸುಂದರ್,ನಾರಾಯಣ ಪಾಳ್ಯ, ಜನಾರ್ದನ ಏನಾಜೆ, ಪ್ರದೀಪ್ ಮಡಲ  ಉಪಸ್ಥಿತರಿದ್ದರು. 2025ನೇ ಜನವರಿ 3 ರವಿವಾರದಂದು ಪೆರಾಜೆ ಗುತ್ತು ಪದ್ಮಾವತಿ ಆಳ್ವರವರ ನೇತೃತ್ವದಲ್ಲಿ, ನೀಲೇಶ್ವರ ಪದ್ಮನಾಭ ತಂತ್ರಿಗಳ ದಿವ್ಯ ಉಪಸ್ಥಿತಿಯಲ್ಲಿ ಪೂಜಾ ವಿಧಿವಿಧಾನಗಳೊಂದಿಗೆ ದೈವಗಳ ಬಾಲಾಲಯ ಸ್ಥಾಪನೆಯಾಗಿ ದೈವ ಭಕ್ತರ ಕರ ಸೇವೆಯೊಂದಿಗೆ ನೂತನ ಭಂಡಾರ ಮನೆಯ ನಿರ್ಮಾಣ ಕಾರ್ಯಗಳು ಆರಂಭಗೊಳ್ಳಲಿವೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts