ಬಂಟ್ವಾಳ

ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ, ಕವನ ಸ್ಪರ್ಧೆ ಫಲಿತಾಂಶ ಪ್ರಕಟ

ಜಾಹೀರಾತು

ಮಂಚಿ ಕೊಳ್ನಾಡು ಹೈಸ್ಕೂಲಿನಲ್ಲಿ ಜ.4, 5ರಂದು ನಡೆಯಲಿರುವ ಬಂಟ್ವಾಳ ತಾಲೂಕು 23ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ನಿಮಿತ್ತ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದ್ದ ಬಂಟ್ವಾಳ ತಾಲೂಕು ಮಟ್ಟದ ಮುಕ್ತ ಕಥಾ ಸ್ಪರ್ಧೆ ಮತ್ತು ಕವನ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕೋಶಾಧಿಕಾರಿಯಾದ ಉಪನ್ಯಾಸಕ ಡಿ.ಬಿ. ರಹಿಮಾನ್ ಫಲಿತಾಂಶ ಬಿಡುಗಡೆಗೊಳಿಸಿದರು. ವಿಜೇತರ ಪಟ್ಟಿಯನ್ನು ಸ್ಮರಣ ಸಂಚಿಕೆಯ ಸಮಿತಿಯ ಸಂಚಾಲಕ ಹಮೀದ್ ಡಿ ವಾಚಿಸಿದರು. 

ಕಥಾ ಸ್ಪರ್ಧೆ: ಪ್ರಥಮ ಸುಲ್ತಾನ್ ಮನ್ಸೂರ್ ಕುಕ್ಕಾಜೆ ಮಂಚಿ , ದ್ವಿತೀಯ: ಚೇತನ್ ಮುಂಡಾಜೆ , ತೃತೀಯ ಹಸೀನ ಮಲ್ನಾಡ್. ಮೆಚ್ಚುಗೆ ಪಡೆದವರು. ಹೇಮಂತ್ ಸಜಿಪ ಮುನ್ನೂರು, ತುಳಸಿ ಕೈರಂಗಳ, ಎಚ್ಕೆ ನಯನಾಡು, ಸಂಧ್ಯಾ ಎನ್ ಮಣಿ ನಾಲ್ಕೂರು, ಹಾಶ್ ಮಹಮ್ಮದ್ ಕುಳಾಲು, ರಜನಿ ಚಿಕ್ಕಯ್ಯಮಠ ಬಿ.ಸಿ ರೋಡು, ಪೂರ್ಣಿಮಾ ರಾಮಚಂದ್ರ ನಾಯಕ್ ಸಾಲೆತ್ತೂರು

ಕವನ ಸ್ಪರ್ಧೆ: ಪ್ರಥಮ ಹಸೀನ ಮಲ್ನಾಡ್, ದ್ವಿತೀಯ ಸಂತೋಷ್ ಆಚಾರ್ಯ ಕುರಿಯಾಳ ಸೊರ್ನಾಡು, ತೃತೀಯ ತುಳಸಿ ಕೈರಂಗಳ. ಮೆಚ್ಚುಗೆ ಪಡೆದವರು. ಎಚ್. ಕೆ ನಯನಾಡು, ವಾಣಿ ವಿ.ಎಸ್ ಮಯ್ಯರಬೈಲು, ಸಂಧ್ಯಾ ಎನ್ ಮಣಿನಾಲ್ಕೂರು, ವಿಜಯಲಕ್ಷ್ಮಿ ವಿ ಶೆಟ್ಟಿ ಪೆರ್ನೆ, ಕೀರ್ತಿ ಎಂ  ಮೊಂತಿಮಾರು, ನಿರಂಜನ್ ಕೇಶವ ನಾಯಕ ವಿಟ್ಲ , ಅಬ್ದುಲ್ ಬಾಸಿತ್ ನಚಬೆಟ್ಟು ಪೆರ್ಲಾಪು.

ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರನ್ನು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಹಾಗೂ ಮೆಚ್ಚುಗೆ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ ನೀಡಿ ಸಾಹಿತ್ಯ ಸಮ್ಮೇಳನ ದಿನ ಗೌರವಿಸಲಾಗುವುದು. ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸುಮಾರು ಐವತ್ತು ಪದಾಧಿಕಾರಿಗಳು ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸವಿತಾ ಕಾರ್ಯಕ್ರಮಕ್ಕೆ ಯಶಸ್ಸು ಕೋರಿ ಶುಭ ಹಾರೈಸಿದರು. ಮಂಚಿ – ಕೊಳ್ನಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸುಶೀಲ ವಿಟ್ಲ ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಕೋಶಾಧಿಕಾರಿಯಾದ ಸುಲೈಮಾನ್ ಸುರಿಬೈಲು, ವಂದಿಸಿದರು. ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts