ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್, ಬಂಟ್ವಾಳ ಹಾಗೂ ಚಿಣ್ಣರ ಲೋಕ ಸೇವಾಬಂಧು ಬಂಟ್ವಾಳ ಸಂಯುಕ್ತ ಆಶ್ರಯದಲ್ಲಿ ಬಿ.ಸಿ.ರೋಡ್ ವೃತ್ತ ಬಳಿಯ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಆರಂಭಗೊಂಡ ಕರಾವಳಿ ಕಲೋತ್ಸವ 2024-25 ಮತ್ತು ಬಹುಸಂಸ್ಕೃತಿ ಸಂಭ್ರಮ ಕಾರ್ಯಕ್ರಮದ ಎರಡನೇ ದಿನದ ಶನಿವಾರ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅವರಿಗೆ ಕರಾವಳಿ ಸೌರಭ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಯಿತು. ತುಳು ಸಂಪ್ರದಾಯದಂತೆ ಫಲವಸ್ತು, , ಡಾ. ಆಳ್ವ ಅವರ ಭಾವಚಿತ್ರ ಸಹಿತ ಸುವಸ್ತುಗಳನ್ನು ಸಭಾಂಗಣಕ್ಕೆ ಪಲ್ಲಕ್ಕಿಯಲ್ಲಿ ತಂದು ಡಾ. ಆಳ್ವರಿಗೆ ಸಮರ್ಪಿಸಲಾಯಿತು. ಬಿ.ಸಿ.ರೋಡ್ ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ಅಭಿನಂದನಾ ಭಾಷಣ ಮಾಡಿ ಮೋಹನ ಆಳ್ವ ಅವರು ರೋಲ್ ಮಾಡೆಲ್ ಆಗಿದ್ದಾರೆ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಂ.ಮೋಹನ ಆಳ್ವ, ಧರ್ಮ, ಮತಗಳ ನಡುವಿನ ಪರಿಕಲ್ಪನೆಯನ್ನು ಅರಿಯಬೇಕಾಗಿದೆ. ಎಲ್ಲ ಜಾತಿಗಳು ಒಟ್ಟಾಗಿರುವುದೇ ಸಮಾಜ ಎಂಬುದನ್ನು ತಿಳಿದುಕೊಂಡು ವಾಸಿಸಬೇಕಾಗಿದೆ. ಮುಂದೆ ಆತಂಕದ ಸಮಯವಿದೆ ಎಂಬ ಅಭದ್ರತೆ ಕಾಡುತ್ತಿರುವ ಹೊತ್ತಿದು, ಎಂದರು.
ಉದ್ಯಮಿ, ಮೊಗರ್ನಾಡು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘುನಾಥ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು. 2024-25ರ ಚಿಣ್ಣರ ಅಧ್ಯಕ್ಷೆ ದಿಯಾ ರಾವ್, ಬಿ.ಸಿ.ರೋಡ್ ನೋಟರಿ ಅಶ್ವನಿ ಕುಮಾರ್ ರೈ, ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಚಿಣ್ಣರಲೋಕ ಸಂಸ್ಥೆಯ ಸಂಸ್ಥಾಪಕ ಮೋಹನದಾಸ ಕೊಟ್ಟಾರಿ ಮುನ್ನೂರು, ಕರಾವಳಿ ಉತ್ಸವ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು, ಗೌರವ ಸಲಹೆಗಾರ ಸರಪಾಡಿ ಅಶೋಕ್ ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು, ಉಪಾಧ್ಯಕ್ಷೆ ಫೌಜಿಯಾ, ಗೌರವ ಸಲಹೆಗಾರರಾದ ಪುರುಷೋತ್ತಮ ಕೊಟ್ಟಾರಿ ಕಳ್ಳಿಗೆ, ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ, ನಿರ್ದೇಶಕರಾದ ನವೀನ್ ಕುಮಾರ್ ಮಾಣಿಮಜಲು, ಶಿವಪ್ರಸಾದ್ ಬಂಟ್ವಾಳ, ಇಬ್ರಾಹಿಂ ಕೈಲಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಯೋಗೀಶ್ ಕೆ, ಪ್ರೇಮನಾಥ ಶೆಟ್ಟಿ ಅಂತರ, ಸ್ವಾಗತ ಸಮಿತಿ ಸದಸ್ಯರಾದ ಶಶಿಧರ ಆಚಾರ್ಯ, ಮಾಲಿಕ್ ಕೊಳಕೆ ಮತ್ತಿತರರು ಉಪಸ್ಥಿತರಿದ್ದರು. ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಸ್ವಾಗತಿಸಿದರು. ರಂಗಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ನಿರ್ದೇಶಕ ಪ್ರೇಮನಾಥ ಶೆಟ್ಟಿ ಅಂತರ ವಂದಿಸಿದರು.