Uncategorized

ಸಜೀಪ ಮೂಡ ಸರಕಾರಿ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಸರಕಾರಿ ಪದವಿ ಪೂರ್ವ ಕಾಲೇಜು ಸಜೀಪಮೂಡ ಇಲ್ಲಿನ ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಗುರುವಾರ ಶಾಲೆಯ ಜ್ಞಾನಜ್ಯೋತಿ ವೇದಿಕೆಯಲ್ಲಿ ನಡೆಯಿತು.

ಶಾಲಾ ಎಸ್ ಡಿಎಂಸಿ ಕಾರ್ಯಧ್ಯಕ್ಷ ಜಯಪ್ರಕಾಶ್ ಪೆರ್ವ ಸಭಾ ಕಾರ್ಯಕ್ರಮದ‌ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶ ಸದುಪಯೋಗಿಸಿಕೊಂಡಾಗ ತಮ್ಮೊಳಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಧ್ಯ. ಕಲಿಕೆಯ ಜೊತೆಗೆ ಇನ್ನಿತರ ಸಹಪಠ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ಹಿರಿಯರಾದ ಪ್ರಭಾಕರ ಶೆಟ್ಟಿ ಕಾರ್ಯಕ್ರಮ‌ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶಾರಾದ ಎಸ್. ರಾವ್, ಯಕ್ಷಗುರು ಕರ್ಗಲ್ ವಿಶ್ವೇಶ್ವರ ಭಟ್, ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಸಜೀಪಮೂಡ ಗ್ರಾ.ಪಂ. ಸದಸ್ಯರಾದ ವಿಶ್ವನಾಥ ಬೆಳ್ಚಾಡ ಕೂಡೂರು, ಹಮೀದ್ ಕೊಳಕೆ, ಆಯುಷ್ ಆರೋಗ್ಯ ಮಂದಿರ ಸಜೀಪಮೂಡ ಇಲ್ಲಿನ ವೈದ್ಯಾಧಿಕಾರಿ ಡಾ.ಮಣಿಕರ್ಣಿಕಾ, ಎಸ್ ಡಿ ಎಂಸಿ ಸದಸ್ಯರಾದ ಸೀತಾರಾಮ ಅಗೋಳಿಬೆಟ್ಟು,‌ದಿನಕರ್ ಮಿತ್ತಮಜಲು, ನಳಿನಾಕ್ಷಿ, ದಾಮೋದರ ಮಡಿವಾಳ ಪಡ್ಪು, ಭೂ ಸೇನೆಯ ಯೋಧ ಪ್ರಜ್ವಲ್ ಮಡಿವಾಳ ಪಡ್ಪು ಉಪಸ್ಥಿತರಿದ್ದರು. ನಿವೃತ್ತ ಉಪಪ್ರಾಂಶುಪಾಲೆ ಜಯಲಕ್ಷ್ಮೀ ಪಿ.ಎನ್., ನಿವೃತ್ತ ಶಿಕ್ಷಕರಾದ  ಅಮಾನುಲ್ಲಾ ಖಾನ್, ಸೋಮಪ್ಪ ಮಡಿವಾಳ, ನಿವೃತ್ತ ಗುಮಾಸ್ತೆ ಕುಸುಮಾ ಎಸ್.ಡಿ. ಭಾಗವಹಿಸಿದ್ದರು. ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ ಸ್ವಾಗತಿಸಿದರು, ಶಿಕ್ಷಕ ಬಾಲಕೃಷ್ಣ ಶೆಟ್ಟಿ ಖಂಡಿಗ ಸನ್ಮಾನಿತರ ಪಟ್ಟಿ ವಾಚಿಸಿದರು. ಸಹಶಿಕ್ಷಕಿಯರಾದ ಸುಲೋಚನಾ ಕುಮಾರಿ, ಜೂಲಿಯೆಟ್ ಲೋನಾ ಡೇಸಾ, ಶರ್ಮಿಳಾ ಶೆಣೈ,ಹೇಮಾವತಿ, ಮೋಕ್ಷಿತ ಬಹುಮಾನಿತರ ಪಟ್ಟಿ ವಾಚಿಸಿದರು, ಗಣೇಶ್ ಬಿ. ವಂದಿಸಿದರು. ವೆಂಕಟರಮಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ