ಬಂಟ್ವಾಳ

ಲೊರೆಟ್ಟೊ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮ

ಲೊರೆಟ್ಟೊ ಸಿ.ಬಿ.ಎಸ್.ಇ ಆಂಗ್ಲಮಾಧ್ಯಮ  ಶಾಲೆ ಹಾಗೂ ಲೊರೆಟ್ಟೊ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ವಾರ್ಷಿಕೋತ್ಸವ ಲೊರೆಟ್ಟೊ ವಿದ್ಯಾ ಸಂಸ್ಥೆಗಳ ಮೈದಾನದಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕರಾದ ವಂದನೀಯ  ಸ್ವಾಮಿ ಪ್ರಾನ್ಸಿಸ್ ಕ್ರಾಸ್ತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೋಂದೆಲ್ ಇಲ್ಲಿಯ ಪ್ರಿನ್ಸಿಪಾಲ್ ವಂದನೀಯ  ಸ್ವಾಮಿ ಪೀಟರ್ ಗೊನ್ಸಾಲ್ವಿಸ್, ಪ್ರಿನ್ಸಿಪಾಲ್ ವಂದನೀಯ  ಸ್ವಾಮಿ  ಜೇಸನ್ ವಿಜಯ್  ಮೊನಿಸ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಸಚಿನ್ ನೊರೊನ್ಹಾ,  ಲೊರೆಟ್ಟೊ ಚರ್ಚ್  ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸಿಪ್ರಿಯನ್ ಡಿಸೋಜ, ಲೊರೆಟ್ಟೊ ಅನುದಾನಿತ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಇಡೋಲಿನ್ ರೊಡ್ರಿಗಸ್, ಸಿ ಬಿ ಎಸ್ ಸಿ ಆಂಗ್ಲ ಮಾಧ್ಯಮ ಶಾಲೆಯ ಉಪ ಪ್ರಾಂಶುಪಾಲರಾದ ಅನಿತಾ ಪಾಯ್ಸ್, ಸಿಬಿಎಸ್ಇ ಶಾಲಾ ನಾಯಕರಾದ ಜೋಶಿಲ್  ಪ್ರಿಸ್ಟನ್ ಪಿಂಟೊ, ಸಾನ್ವಿ ಆಚಾರ್ಯ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ನಾಯಕಿ ಅನನ್ಯ ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವವನ್ನು ಗಣ್ಯರು ದೀಪ ಬೆಳಗಿಸಿ  ಉದ್ಘಾಟಿಸಿದರು. ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಭಗಿನಿ ಇಡೋಲಿನ್ ಶಾಲಾ ವರದಿಯನ್ನು ವಾಚಿಸಿದರು. ನಂತರ ಸಿಬಿಎಸ್ಸಿ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಶಾಲಾ ವರದಿಯನ್ನು ವಾಚಿಸಿದರು. ಕರಾಟೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಚಿನ್ಮಯ್ ಪಿ. ಸಿ ಪೂಜಾರಿ, ಸ್ಪೆಲ್ ಬಿಯ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮುಖ್ಯ ಅತಿಥಿಗಳು  ಸ್ಮರಣಿಕೆ ನೀಡಿ ಗೌರವಿಸಿದರು. ಸಭೆಯನ್ನು ಉದ್ದೇಶಿಸಿ  ಮಾತನಾಡಿ “ಮಕ್ಕಳಿಗೆ ಹಣದ ಮೌಲ್ಯವನ್ನು ಕಲಿಸಬೇಕು, ಸಮಯ ನಿರ್ವಹಣಾ ಕೌಶಲ್ಯಗಳಿಗೆ ಒತ್ತುಕೊಡಿ, ಶಿಸ್ತುಬದ್ಧ ವ್ಯಕ್ತಿಗಳಾಗಿ ಬೆಳೆಯಲು ಅವರನ್ನು ಪ್ರೇರೇಪಿಸಬೇಕು. ಪರೋಪಕಾರಿ ಮನೋಭಾವ, ಸಹಾನುಭೂತಿ ಮತ್ತು ಕರುಣೆಯ ಮಹತ್ವವನ್ನು ಬೋಧಿಸಿ, ಅವರು ಬಲವಾದ ಸಂಬಂಧಗಳನ್ನು ನಿರ್ಮಿಸಿ, ಕಾಳಜಿಯುಳ್ಳ ಸಮುದಾಯವನ್ನು ಬೆಳೆಸಲಿ” ಎಂದು ಕರೆ ನೀಡಿದರು.

ವಂದನೀಯ  ಸ್ವಾಮಿ ಫ್ರಾನ್ಸಿಸ್ ಕ್ರಾಸ್ಟಾ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಶಾಲೆಯನ್ನು ನಾಲ್ಕು ಬಲವಾದ ಕಂಬಗಳಿಗೆ ಹೋಲಿಸಿ, ಈ ಕಂಬಗಳು ದೃಢವಾಗಿರುವಾಗ ಮಾತ್ರ ಒಂದು ಶೈಕ್ಷಣಿಕ ಸಂಸ್ಥೆ ಪ್ರಗತಿ ಸಾಧಿಸಬಹುದು ಎಂದು ಹೇಳಿದರು. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಶಿಕ್ಷಣದ ಅಗತ್ಯತೆ ಹಾಗೂ ಅದರ ಪ್ರಾಮುಖ್ಯತೆಯನ್ನು ವಿವರಿಸಿದರು. ಕೃತಕ ಬುದ್ಧಿಮತ್ತೆಯ ಮೇಲೆ ಹೆಚ್ಚುತ್ತಿರುವ ಅವಲಂಬನೆ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು. ನೈಸರ್ಗಿಕ ಚಿಂತನೆಗಳ ದಕ್ಷತೆಯನ್ನು ಅಭಿವೃದ್ದಿ ಮಾಡಿಕೊಳ್ಳಲು ಹಾಗೂ ಸೃಜನಶೀಲತೆ ಮತ್ತು ತಾತ್ತ್ವಿಕ ಚಿಂತನೆಗಳನ್ನು ಬೆಳೆಸಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಉಭಯ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಲಿಯೋರ ಡಿಸೋಜ ಸ್ವಾಗತಿಸಿ, ಪ್ರತೀಕ್ಷಾ ಧನ್ಯವಾದ ಅರ್ಪಿಸಿದರು. ವಿದ್ಯಾರ್ಥಿಗಳಾದ ಪ್ರಿನೀತ್ ಪಿಂಟೋ,  ವೈಷ್ಣವಿ, ಚಿಂತ ನಾ ಮತ್ತು ಪ್ರೀತ್ ಕಾರ್ಯಕ್ರಮವನ್ನು  ನಿರ್ವಹಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts